ಬೆಂಗಳೂರು: ‘ಬಿಜೆಪಿಯ ಬಾಡಿಗೆ ಭಾಷಣಕೋರನೊಬ್ಬ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವುದು ಜಗತ್ತಿನ 8ನೇ ಅದ್ಬುತ ಸಂಭವಿಸಿದಂತೆಯೇ ಸರಿ!. ಇಂತಹ ಅದ್ಬುತ ಸಂಭವಿಸಲು ಸರ್ಕಾರದ ವೈಫಲ್ಯಗಳು ಮಾತ್ರ ಕಾರಣವೇ ಅಥವಾ ಬಿಜೆಪಿvsಬಿಜೆಪಿ ಜಟಾಪಟಿಯ ಮುಂದುವರೆದ ಭಾಗವೇ?
ಅಥವಾ ವಲಸಿಗ ಬಸವರಾಜ ಬೊಮ್ಮಾಯಿ ವಿರುದ್ದದ ಅಸಹನೆಯೇ’ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕಡತಗಳಿಗೆ ಸಹಿ ಹಾಕಲು ಪುರಸೊತ್ತಿಲ್ಲದ ಸಿಎಂಗೆ ಸಿನೆಮಾಗಳ ಬಗ್ಗೆ ಎಲ್ಲಿಲ್ಲದ ಆಸಕ್ತಿ ಎಂದಿದ್ದಾನೆ ಬಿಜೆಪಿಯ ಬಾಡಿಗೆ ಭಾಷಣಕೋರ!. ಬಸವರಾಜ ಬೊಮ್ಮಾಯಿ ಅವರೇ, ತಮ್ಮ ನಿಷ್ಕ್ರೀಯತೆಯ ಬಗ್ಗೆ ನಿಮ್ಮವರಿಂದಲೇ ಟೀಕೆಗಳು ಬಂದಿದ್ದರೂ ತಾವು ಗಟ್ಟಿ ಧ್ವನಿಯಲ್ಲಿ ಮಾತನಾಡದಿರುವುದೇಕೆ? ತಪ್ಪಿತಸ್ಥನ ಭಾವನೆಯೋ? ಅವರ ವಿರುದ್ಧ ಮಾತಾಡಲು ಭಯವೋ?’ ಎಂದು ಆರೋಪಿಸಿದೆ.