ವಿಜಯಪುರ: ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಎಚ್ಚರಿಕೆಗೆ ಹೆದರಿದ ಭೀಮಾತೀರದ ಕುಖ್ಯಾತ ಹಂತಕ ಮಲ್ಲಿಕಾರ್ಜುನ್ ಚಡಚಣನ ಪತ್ನಿ ವಿಮಲಾಬಾಯಿ ಚಡಚಣ ನ್ಯಾಯಾಲಯಕ್ಕೆ ಆಗಮಿಸಿ ಬಂದು ಶರಣಾಗಿದ್ದಾಳೆ.
ವಿಜಯಪುರ 4ನೇ JMFC ನ್ಯಾಯಾಲಯಕ್ಕೆ ಆಗಮಿಸಿ ವಿಮಲಾಬಾಯಿ ಶರಣಾಗಿದ್ದಾಳೆ.
2020ರ ನವೆಂಬರ್ 2 ರಂದು ಮಹಾದೇವ ಸಾಹುಕಾರ ಬೈರಗೊಂಡ ಮೇಲೆ ನಡೆದ ದಾಳಿಯ ಬಳಿಕ ವಿಮಲಾಬಾಯಿ ಭೂಗತಳಾಗಿದ್ದಳು. ಕೆಲ ದಿನಗಳ ಹಿಂದಷ್ಟೇ ಅಲೋಕ್ ಕುಮಾರ್ ಅವರು ಭೂಗತರಾದ ಚಡಚಣ ಗ್ಯಾಂಗ್ ಸದಸ್ಯರಿಗೆ ಎಚ್ಚರಿಕೆ ನೀಡಿದ್ದರು.
ಕೋರ್ಟ್ ಮುಂದೆ ಶರಣಾಗಿ, ಇಲ್ಲದಿದ್ದರೆ ಆಸ್ತಿ ಜಪ್ತಿ ಮಾಡಲಾಗುವುದು ಎಂದು ಭೀಮಾತೀರದ ಮಾಸ್ಟರ್ ಮೈಂಡ್ ನಟೋರಿಯಸ್ ಹಂತಕ ಮಲ್ಲಿಕಾರ್ಜುನ್ ಚಡಚಣ, ಆತನ ಪತ್ನಿ ವಿಮಲಾಬಾಯಿಗೆ ಅಲೋಕ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಇಬ್ಬರ ವಿರುದ್ಧವು ಪೊಲೀಸ್ ಇಲಾಖೆ ಉದ್ಘೋಷಣೆ ಸಹ ಹೊರಡಿಸಿತ್ತು.
ಇದೀಗ ಆಸ್ತಿ ಜಪ್ತಿಯಾಗುವ ಭಯದಿಂದ ವಿಮಲಾಬಾಯಿ ಹಾಗೂ ಸಹಚರ ಸೋನ್ಯಾ ರಾಠೋಡ ಕೋರ್ಟ್ಗೆ ಹಾಜರಾಗಿದ್ದಾರೆ. ಮಹಾದೇವ ಬೈರಗೊಂಡ ಮೇಲೆ ನಡೆದ ದಾಳಿಯಲ್ಲಿ ವಿಮಲಾಬಾಯಿ ಎ2 ಹಾಗೂ ಸೋನ್ಯಾ ರಾಠೋಡ ಎ39 ಆರೋಪಿಯಾಗಿದ್ದಾರೆ. ಇಂದು ಇಬ್ಬರು ಬಂದು 4ನೇ JMFC ನ್ಯಾಯಾಲಯಕ್ಕೆ ಶರಾಗಿದ್ದಾರೆ.
ವಿಮಲಾಬಾಯಿ ಮತ್ತು ಸೋನ್ಯಾ ರಾಠೋಡನ್ಯಾಯಾಲಯ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಕೋರ್ಟ್ನಿಂದ ಅನುಮತಿ ಪಡೆದ ಬಳಿಕ ಪೊಲೀಸರು, ವಿಮಲಾಬಾಯಿ ವಿಚಾರಣೆ ನಡೆಸಲಿದ್ದಾರೆ. ಮಹಾದೇವ ಸಾಹುಕಾರ ಬೈರಗೊಂಡ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಇಬ್ಬರನ್ನೂ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ