Breaking News

ಪಂಜಾಬ್ ಮಾದರಿಯಲ್ಲಿ ಕರ್ನಾಟಕದಲ್ಲೂ ಆಪ್ ಗೆ ಅಧಿಕಾರ: ಭಾಸ್ಕರ ರಾವ್

Spread the love

ಹುಬ್ಬಳ್ಳಿ: ಹೊಂದಾಣಿಕೆ ರಾಜಕೀಯಕ್ಕೆ ಅವಕಾಶ ನೀಡದೆ, ವಿಷಯಾಧಾರಿತ ಚುನಾವಣೆಗೆ ಹೋಗುತ್ತೇವೆ. ಪಂಜಾಬ್ ಮಾದರಿಯಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಆಪ್ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಕಿತ್ತಾಟ, ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ.

ಇರುವ ಪ್ರಮುಖ ಮೂರು ಪಕ್ಷಗಳು ಪರಸ್ಪರ ಆರೋಪ, ಹಗರಣಗಳ ಪ್ರಸ್ತಾಪಗಳ ಮೂಲಕ ಜನರ ಸಮಸ್ಯೆ, ನೈಜ ವಿಷಯಗಳನ್ನು ಮರೆಮಾಚಿಸಲಾಗುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಈಗಲೇ ಕಿತ್ತಾಟ ಶುರುವಾಗಿದೆ. ಮತದಾರರ ತೀರ್ಪು ಮೊದಲೇ ಸಿಎಂ ನಾನೇ ಎಂಬುದು ಜನತೆಗೆ ಮಾಡುವ ಅವಮಾನವಾಗಿದೆ ಎಂದರು.

ಆಪ್ ಯುವಕರು, ಮಹಿಳೆಯರು, ರೈತರು, ಕಾರ್ಮಿಕರು ಸೇರಿದಂತೆ ಹತ್ತು ವಿಭಾಗಳನ್ನು ಮಾಡಿದ್ದು, ತರಬೇತಿ, ಜವಾಬ್ದಾರಿ, ಅವಕಾಶ ನೀಡಿಕೆ ಕಾರ್ಯ ಮಾಡುತ್ತಿದೆ. ಗ್ರಾಮೀಣದಲ್ಲೂ ಪಕ್ಷ ಸಂಘಟನೆಗೆ ಒತ್ತು ನೀಡಿದ್ದೇವೆ.

ನಾವು ಅಧಿಕಾರಕ್ಕೆ ಬಂದರ ಏನು ಮಾಡುತ್ತೇವೆ ಎಂಬುದನ್ನು ಮನವರಿಕೆ ಮಾಡುತ್ತೇವೆ. ದೆಹಲಿ ಮಾದರಿಯಲ್ಲಿ ಸರಕಾರಿ ಶಾಲೆ-ಆಸ್ಪತ್ರೆಗಳನ್ನು ವಿಶ್ವದರ್ಜೆ ಮಾದಿಯಾಗಿ ಮಾಡುತ್ತೇವೆ ಎಂದರು.

ಉತ್ತರ ಕರ್ನಾಟಕದ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಇಲ್ಲಿವರೆಗೆ ಅಧಿಕಾರ ನಡೆಸಿದವರು, ಅಧಿಕಾರದಲ್ಲಿದ್ದವರಿಗೆ ಸ್ಪಷ್ಟ ಚಿಂತನೆ, ನೀಲನಕ್ಷೆ ಇಲ್ಲವಾಗಿದೆ ಎಂದರು.

ಕೇಂದ್ರ ಸರಕಾರ 25 ಕೆ.ಜಿ ಒಳಗಿನ ಆಹಾರ ಧಾನ್ಯಗಳ ಖರೀದಿಗೆ ಜಿಎಸ್ ಟಿ ವಿಧಿಸುತ್ತಿದೆ. ಅಲ್ಲಿಗೆ ತಾನು ಶ್ರೀಮಂತರ ಪರ ಸರಕಾರ ಎಂಬುದನ್ನು ಸಾಬೀತು ಪಡಿಸಿದೆ ಎಂದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ