ಗದಗ: ಕಾಮಗಾರಿ (Work) ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧವಾಗಿತ್ತು. ಈ ಬಸ್ ನಿಲ್ದಾಣ (Bus Stand) ಕಟ್ಟಡದ ಉದ್ಘಾಟನೆ (Inauguration) ಯಾವಾಗ ಎಂದು ಎದುರು ನೋಡುತ್ತಿದ್ದ ಜನ ಅದಕ್ಕೊಂದು ಶುಭ ಮುಹೂರ್ತವನ್ನು ನಿಗದಿ ಮಾಡಿಯೇಬಿಟ್ಟರು. ಅವರೆಲ್ಲ ಎದುರು ನೋಡುತ್ತಿದ್ದ ಶುಭ ಸಮಯ ಬಂದೇಬಿಟ್ಟಿತು. ಗ್ರಾಮಸ್ಥರೆಲ್ಲರೂ (Villagers) ಸೇರಿ ಉದ್ಘಾಟಕರನ್ನು ಬಿಗಿ ಭದ್ರತೆಯೊಂದಿಗೆ, ದೊಡ್ಡ ಸ್ವರದ ಮೈಕ್ ಸ್ವಾಗತದೊಂದಿಗೆ, ಹೂಮಾಲೆಗಳಿಂದ, ಬ್ಯಾನರ್ ಗಳಿಂದ ಸಿಂಗಾರಗೊಂಡಿದ್ದ ಬಸ್ ನಿಲ್ದಾಣದ ಬಳಿ ಕರೆತಂದು ರಿಬ್ಬನ್ (Ribbon) ಕಟ್ ಮಾಡಿಸಿ ಉದ್ಘಾಟಿಸಿದ್ರು.
ಪ್ರಸ್ತುತ ಲೋಕಾರ್ಪಣೆಗೊಂಡಿದ್ದು ತೆಂಗಿನ ಗರಿಗಳಿಂದ ಸಿದ್ಧಪಡಿಸಿದ್ದ ಬಸ್ ನಿಲ್ದಾಣ ಹಾಗೂ ಉದ್ಘಾಟಿಸಿದ್ದು ಯಾವುದೋ ರಾಜಕಾರಣಿ (Politician) ಅಥವಾ ಜನಪ್ರತಿನಿಧಿಯಲ್ಲ. ಎಂಎಲ್‌ಎ (MLA) ಬದಲಾಗಿ ಉದ್ಘಾಟನೆಗೆಂದು ಆಹ್ವಾನಿಸಿದ್ದು ಒಂದು ಎಮ್ಮೆಯನ್ನು (Buffalo).
ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರು ಗ್ರಾಮದಲ್ಲಿ ಬಿದ್ದುಹೋಗಿರುವ ಬಸ್ ನಿಲ್ದಾಣದ ಎದುರು ತೆಂಗಿನ ಗರಿಯ ಮೂಲಕ ಚಪ್ಪರ ಕಟ್ಟಿ, ಚಪ್ಪರದ ಬಸ್ ನಿಲ್ದಾಣವನ್ನ ಉದ್ಘಾಟನೆ ಮಾಡಲಾಯ್ತು. ಕಿತ್ತೋಗಿರೋ ಬಸ್ ನಿಲ್ದಾಣದ ಉದ್ಘಾಟನೆಗೆ ಎಮ್ ಎಲ್ ಎ ಬದಲು ಎಮ್ಮೆಯನ್ನ ಚೀಫ್ ಗೆಸ್ಟ್ ಮಾಡಲಾಗಿತ್ತು.
ದಶಕದ ಹಿಂದೆಯೇ ಬಾಲೇಹೊಸೂರು ಗ್ರಾಮದ ಬಸ್ ನಿಲ್ದಾಣ ಬಿದ್ದು ಹೋಗಿವೆ.. ಈ ಬಗ್ಗೆ ಸ್ಥಳೀಯ ಶಾಸಕ ರಾಮಪ್ಪ ಲಮಾಣಿ, ಸಂಸದ ಶಿವಕುಮಾರ್ ಉದಾಸಿಯವರಿಗೆ ಮನವಿ ಸಲ್ಲಿಸಲಾಗಿತ್ತು. ಆದ್ರೆ ಸೂಕ್ತ ಭರವಸೆ ಸಿಕ್ಕಿರಲಿಲ್ವಂತೆ.. ಹೀಗಾಗಿ ಗ್ರಾಮಸ್ಥರು ಸೇರ್ಕೊಂಡು ಚಪ್ಪರದ ಬಸ್ ನಿಲ್ದಾಣ ಮಾಡಿ, ಉದ್ಘಾಟನೆಯನ್ನೂ ಮಾಡಿದಾರೆ.