ಬೆಳಗಾವಿ: ನಾನಾ ರಾಜ್ಯಗಳಲ್ಲಿ ಕಿರಾಣಿ ಹಾಗೂ ಆಭರಣ ಅಂಗಡಿಗಳಲ್ಲಿ ಕಳುವು ನಡೆಸುತ್ತಿದ್ದ ಕುಖ್ಯಾತ ಇರಾನಿ ಗ್ಯಾಂಗ್ ನ ಇಬ್ಬರನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 9,58,000 ರೂ. ಮೌಲ್ಯದ ಬಂಗಾರದ ಆಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ಕಳೆದ ತಿಂಗಳು ಹುಕ್ಕೇರಿ ಪಟ್ಟಣದ ವಿದ್ಯಾ ಜ್ಯುವೆಲರಿ ಶಾಪ್‌ನಲ್ಲಿ ಮಾಲೀಕರ ಗಮನ ಬೇರೆಡೆ ಸೆಳೆದು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಅಂಗಡಿ ಮಾಲೀಕರು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತನಿಖೆ ಕೈಗೊಂಡ ಪೊಲೀಸ್ ನಿರೀಕ್ಷಕರು ಮತ್ತು ಅವರ ತಂಡದ ಸಿಬ್ಬಂದಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಕಳ್ಳತನ ಮಾಡುವ ಇರಾನಿ ಗ್ಯಾಂಗ್‌ನ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಹುಕ್ಕೇರಿ ಪಟ್ಟಣದ ಕಿರಾಣಿ ಅಂಗಡಿ ಮತ್ತು ಜ್ಯುವೆಲರಿ ಶಾಪ್‌ನಲ್ಲಿ ಕಳ್ಳತನ ನಡೆಸಿದಂತೆ ಮೂಡಲಗಿ ಹಾಗೂ ಮಹಾರಾಷ್ಟ್ರದ ಚಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಗಾರದ ಅಂಗಡಿಗಳನ್ನು ಕಳ್ಳತನ ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಂಧಿತ ಆರೋಪಿತರಿಂದ ಕಿರಾಣಿ ಅಂಗಡಿಯಲ್ಲಿ ಕಳ್ಳತನವಾಗಿದ್ದ 2.08 ಲಕ್ಷ ರೂ. ನಗದು ಹಾಗೂ ಬಂಗಾರದ ಅಂಗಡಿಯ ಕಳ್ಳತನಕ್ಕೆ ಸಂಬಂಧಿಸಿದಂತೆ 7.50 ಲಕ್ಷ ಮೌಲ್ಯದ 150 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾದ ತಲೆಮರೆಸಿಕೊಂಡಿರುವ ಇನ್ನೂ ಇಬ್ಬರೂ ಆರೋಪಿತರ ಪತ್ತೆಗೆ ತಂಡ ರಚಿಸಲಾಗಿದೆ.
ಹೆಚ್ಚುವರಿ ಎಸ್ ಪಿ, ಗೋಕಾಕ ಡಿಎಸ್ ಪಿ ಮಾರ್ಗದರ್ಶನದಲ್ಲಿ ಹುಕ್ಕೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಂ.ಎಂ. ತಹಶೀಲ್ದಾರ, ಪಿಎಸ್ಐ (ಅ.ವಿ), ಎಎಸ್ಐ ಎಲ್. ಎಲ್. ಪತ್ತೆನ್ನವರ, ಎ.ಎಸ್.ಸನದಿ ಹಾಗೂ ಸಿಬ್ಬಂದಿಗಳಾದ ಸಿಎಚ್ ಸಿ ಆರ್.ಎಂ. ಯರಗಟ್ಟಿ ಸಿಪಿಸಿಗಳಾದ ಮಂಜುನಾಥ.ಎಸ್.ಕಬ್ಬರ , ಜಿ.ಎಸ್. ಕಾಂಬಳೆ , ಎಸ್.ಆರ್. ರಾಮದುರ್ಗ, ಯು. ವೈ.ಅರಬಾವಿ, ಎಲ್ ನಾಯಕ, ಡಬ್ಲುಪಿಸಿ ಎಲ್.ಬಿ. ಹಂಜಾನಟ್ಟಿ, ಎಚ್ ಸಿ ರಾವಸಾಹೇಬ ಬೊಮ್ಮನಾಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.