ಬೆಳಗಾವಿ: ಭಾರತ ದೇಶದಲ್ಲಿ ಅನೇಕ ಧರ್ಮ, ಮತ, ಪಂಥಗಳಿವೆ. ಅದರಲ್ಲಿ ಹಿಂದುಯುಕ್ತ, ಸನಾತನ, ವೀರಶೈವ ಧರ್ಮವಿದೆ. 800 ವರ್ಷಗಳ ಹಿಂದೆಯೇ ಪಂಚ ಪೀಠಾಧೀಶ ಸ್ಥಾಪಿತವಾಗಿದ್ದು, ಅದಕ್ಕೆ ಬಸವೇಶ್ವರರು ಬೆಂಬಲ ನೀಡಿದ್ದಾರೆ ಎಂದು ಕೇದಾರಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

308 ಜಾತಿಗಳಿವೆ: ನಗರದಲ್ಲಿ ಲಿಂಗಾಯತ ಪಂಚಮಸಾಲಿ ಸೇರಿ ವಿವಿಧ ಸಮುದಾಯಗಳಿಗೆ ಮೀಸಲಾತಿ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದರ ಬಗ್ಗೆ ಕೇಂದ್ರದಲ್ಲಿ ನಾವು ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಹಿಂದೆ ಎಲ್.ಕೆ. ಅಡ್ವಾಣಿ, ಶಿವರಾಜ ಪಾಟೀಲ್ ಸಚಿವರಿದ್ದಾಗ ಚರ್ಚೆ ಮಾಡಿದ್ದೇವೆ. 308 ಜಾತಿಗಳಿವೆ. ಆ ಸಂವಿಧಾನದಲ್ಲಿ ಜಾತಿ ಮತ್ತು ಧರ್ಮಕ್ಕೆ ಆಸ್ಪದವಿಲ್ಲ. ನೀವು ಪರಂಪರೆಯಿಂದ ಮಾಡ್ತಿದ್ರೆ, ಅದಕ್ಕೆ ಶಾಸನದ ವಿರೋಧ ಇದೆ ಎಂದರು.ಕೇಂದ್ರದಲ್ಲಿ ಶಂಕರರಾವ್ ಚೌಹಾನ್ ಗೃಹಮಂತ್ರಿ ಇದ್ದಾಗ 15 ದಿವಸ ದೆಹಲಿಯಲ್ಲಿ ಬೀಡುಬಿಟ್ಟಿದೆ. ಅಂತ್ರೊಪೊಲಾಜಿಕಲ್ ಸರ್ವೇ ಆಫ್ ಇಂಡಿಯಾ ಅಂತಾ ಇರುತ್ತದೆ. ಅಲ್ಲಿಂದ ತಯಾರಾಗಿ ಲೋಕಸಭೆ, ಮಂತ್ರಿಮಂಡಲದಲ್ಲಿ ಪಾಸ್ ಆದಾಗ ಮೀಸಲಾತಿ ಸಿಗುತ್ತದೆ. ಇದು ಮುಖ್ಯಮಂತ್ರಿಗಳ ಕೈಯಲ್ಲೂ ಇಲ್ಲ. ರಾಜ್ಯ ಸರ್ಕಾರದ ಕೈಯಲ್ಲೂ ಇಲ್ಲ. ಕೇಂದ್ರ ಸರ್ಕಾರದಲ್ಲಿರುತ್ತದೆ. ಹೀಗಾಗಿ ನಮ್ಮ ಪರಂಪರೆ ಏನಿದೆ ಅದನ್ನ ಹಿಡಿದುಕೊಂಡು ಹೋಗಬೇಕು ಎಂದರು.