Breaking News

ಸರ್ಕಾರಿ ಕಾಮಗಾರಿಗೆ ರೈತನ ಜಮೀನಿನ ಮಣ್ಣು ಬಳಕೆ; ಅಕ್ರಮದ ವಿರುದ್ಧ ಕ್ರಮಕ್ಕೆ ಆಗ್ರಹ

Spread the love

ಧಾರವಾಡ : ಇಂದಿರಮ್ಮನ ಕೆರೆ ಧಾರವಾಡ ಜಿಲ್ಲೆಯ ಬೃಹತ್ ಕೆರೆಗಳಲ್ಲಿ (Dharwad Lakes) ಒಂದಾಗಿರುವ ಕೆರೆ. ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೆರೆ ಗ್ರಾಮದ (Hulikere Village) ಈ ಕೆರೆ ಕಳೆದ ಎರಡು ವರ್ಷಗಳ ಹಿಂದೆ ಸುರಿದ ಬಾರಿ ಮಳೆಯಿಂದ ಕೆರೆಯ ತಡೆ ಗೋಡೆ ಒಡೆದಿತ್ತು.

ಇದರ ತಡೆಗೋಡೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ‌ ಕೋಟಿ ಕೋಟಿ ಹಣ ಬಿಡುಗಡೆ ಸಹ ಮಾಡಿದೆ. ಕಾಮಗಾರಿಯೂ ಸಹ ಭರದಿಂದ ಸಾಗಿದೆ. ಆದ್ರೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಮಾಡಿರುವ ಯಡವಟ್ಟಿ ನಿಂದ‌ ಕೆರೆಯ ಪಕ್ಕದ‌ ಜಮೀನ ರೈತ ಕಂಗಾಲಾಗುವಂತೆ ಮಾಡಿದೆ. ಕೆರೆಯ ಪಕ್ಕದಲ್ಲಿನ ಸರ್ವೆ ನಂಬರ್ 33/p1 ನಲ್ಲಿನ 4 ಎಕರೆ 15 ಗುಂಟೆ ಜಮೀನು ಮೃತ್ಯುಂಜಯ ಯರಗಂಬಳಿಮಠ ಅವರಿಗೆ ಸೇರಿದ ಜಮೀನು. ಈ ಜಮೀನಲ್ಲಿನ ಮಣ್ಣು ಹಾಗೂ ಕಲ್ಲನ್ನು ಅಕ್ರಮವಾಗಿ ತೆಗೆದು ಕೆರೆ ಕಾಮಗಾರಿಗೆ ಬಳಕೆ ಮಾಡಲಾಗಿದೆ.

ಜಮೀನಿನಿಂದ ಅಕ್ರಮವಾಗಿ ಮಣ್ಣು ತೆಗೆದು ಬಳಕೆ

ಮೃತ್ಯುಂಜಯ ಅವರು ಮೂಲತಃ ಹುಲಿಕೆರಿ ಗ್ರಮದ ನಿವಾಸಿ, ಆದ್ರೆ ವೃತ್ತಿಯಲ್ಲಿ ಇವರು ವಕೀಲರಾದ ಕಾರಣ ಬೆಂಗಳೂರಲ್ಲಿ ಇರುತ್ತಾರೆ. ಇವರು ಗ್ರಾಮದಲ್ಲಿ ಇರೋದಿಲ್ಲ ಎಂದು ತಿಳಿದ ಹೆಗಡೆ ಎಂಬುವ ಗುತ್ತಿಗೆದಾರರು ರೈತರ ಪರವಾನಿಗೆ ಇಲ್ಲದೇ ಹಗಲು ರಾತ್ರಿ ಎನ್ನದೆ ಮಣ್ಣು ಹಾಗೂ ಕಲ್ಲನು ತೆಗೆದು ತಮ್ಮ ಕಾಮಗಾರಿಗೆ ಬಳಕೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿಯುತ್ತಿದಂತೆ‌ ಜಮೀನ‌ ಮಾಲೀಕರಾದ ಮೃತ್ಯುಂಜಯ ಅವರು ಬೆಂಗಳೂರಿನಿಂದ ಗ್ರಾಮಕ್ಕೆ ಆಗಮಿಸಿ ತಮ್ಮ‌ ಜಮೀನಲ್ಲಿ‌ನಡೆಯುತ್ತಿರೊ ಅಕ್ರಮದ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ಲದೇ ಜಮೀನಿಗೆ ಹೋದ ಸಮಯದಲ್ಲಿ ಜಮೀನಿನಲ್ಲಿ ಇದ್ದ ಹಿಟ್ಯಾಚ್, ಟಿಪ್ಪರ್ ಅನ್ನು ತಡೆದು ಪೊಲೀಸ್ ರ ವಶ ಪಡೆಯುವಂತೆ‌ ಮನವಿ ಮಾಡಿದ್ದಾರೆ


Spread the love

About Laxminews 24x7

Check Also

ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ ಶಾಸಕ ಅರವಿಂದ ಬೆಲ್ಲದ.

Spread the love ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ