ಕಿಚ್ಚ ಸುದೀಪ್‌ಗೆ ವಿರುದ್ಧ ಅವಹೇಳನಕಾರಿ ವಿಡಿಯೋಗೆ ನಂದ ಕಿಶೋರ್ ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲವು ದಿನಗಳ ಹಿಂದೆ ಚರಣ್ ಎಂಬುವ ವ್ಯಕ್ತಿ ಕಿಚ್ಚ ಸುದೀಪ್ ರಮ್ಮಿ ಜಾಹೀರಾತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನಿರ್ದೇಶಕ ನಂದ ಕಿಶೋರ್ ಅಖಾಡಕ್ಕಿಳಿದಿದ್ದರು.
ನಿನ್ನೆ (ಜುಲೈ 03) ಕಿಚ್ಚ ಸುದೀಪ್ ವಿರುದ್ಧ ತಿರುಗಿಬಿದ್ದಿದ್ದ ವ್ಯಕ್ತಿಯ ವಿರುದ್ಧ ನಂದ ಕಿಶೋರ್ ಕಿಡಿಕಾರಿದ್ದರು. ” ಸುದೀಪ್ ಅವರ ಸಾಧನೆ ದೊಡ್ಡದು. ಅಂಥಹವರ ಬಗ್ಗೆ ದಾರಿಯಲ್ಲಿ ಹೀಗುವವರೆಲ್ಲ ಏನೋ ಒಂದು ಮಾತಾಡುತ್ತಾರೆ ಎಂದರೆ ಬಹಳ ತಪ್ಪಾಗುತ್ತೆ. ಕನ್ನಡದ ನಟನಿಗೆ ನಪುಂಸಕ ಎಂದು ಹೇಳುವ ನಿನ್ನ ಭಾಷೆಯಲ್ಲಿಯೇ ಗೊತ್ತಾಗುತ್ತೆ. ನೀನು ಎಂಥಹ ಸಂಸ್ಕಾರದಿಂದ ಬಂದಿದ್ದೀಯಾ ಅಂತ. ನೀನು ನಪೂಂಸಕನಾಗಿಲ್ಲದೆ ಇದ್ದರೆ, ಈಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲಿದ್ದೀಯಾ? ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದರು.
Laxmi News 24×7