Home / ರಾಜಕೀಯ / ವಿವಾಹ ನೋಂದಣಿ ವೆಬ್‌ಸೈಟ್‌ ಮೂಲಕ ಮೋಸ: ಖತರ್ನಾಕ್​ ವ್ಯಕ್ತಿ ಬಂಧಿಸಿದ ಪೊಲೀಸರು

ವಿವಾಹ ನೋಂದಣಿ ವೆಬ್‌ಸೈಟ್‌ ಮೂಲಕ ಮೋಸ: ಖತರ್ನಾಕ್​ ವ್ಯಕ್ತಿ ಬಂಧಿಸಿದ ಪೊಲೀಸರು

Spread the love

ರಾಮನಗರ: ವಿವಾಹ ನೋಂದಣಿ ವೆಬ್‌ಸೈಟ್‌ನಲ್ಲಿ ಬೇರೆ ಯುವಕರ ಫೋಟೊ ಹಾಕಿ, ಮದುವೆ ಮಾಡಿಸುವುದಾಗಿ ಸಾರ್ವಜನಿಕರಿಗೆ ನಂಬಿಸಿ ಹಣ ಲಪಟಾಯಿಸುತ್ತಿದ್ದ ನವೀನ್ ವೈ ಸಿಂಗ್ ಎಂಬುವನನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಮಾತನಾಡಿ, ಕಳೆದ ಮಾರ್ಚ್ ತಿಂಗಳಿನಲ್ಲಿ ದೀಪಾ ಎಂಬುವವರು ರಾಮನಗರದ ಸಿಇಎನ್ ಕ್ರೈಂ ಠಾಣೆಯಲ್ಲಿ ನವೀನ್ ವೈ ಸಿಂಗ್ ಎಂಬುವವನ ವಿರುದ್ಧ ದೂರು ದಾಖಲು ಮಾಡಿದ್ದರು ಎಂದು ಹೇಳಿದರು.

ನವೀನ್ ವಾಟ್ಸ್​ಆ್ಯಪ್​​​ ಗ್ರೂಪ್ ಮ್ಯಾಟ್ರಿಮೋನಿಯಲ್ ಮುಖಾಂತರ ಯುವತಿ ಪರಿಚಯ ಮಾಡಿಕೊಂಡು ಸ್ನೇಹ ಸಂಪಾದನೆ ಮಾಡಿಕೊಂಡಿದ್ದಾನೆ. ಇದಾದ ಬಳಿಕ ಸಮುದಾಯದ ಯುವಕರೊಂದಿಗೆ ಮದುವೆ ಮಾಡಿಸುವುದಾಗಿ ನಂಬಿಸಿ, ಯುವತಿ ಹಾಗೂ ಮತ್ತವರ ಕುಟುಂಬದಿಂದ 7 ಲಕ್ಷ ಹಣ ಪೀಕಿದ್ದಾನೆ. ಇನ್ನು ಆನ್‌ಲೈನ್ ಶಾಪಿಂಗ್‌ನಲ್ಲಿ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ಜತೆಗೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿ ವರ್ಗಾವಣೆ ಮಾಡಿಸುವುದಾಗಿಯೂ ಸೇರಿದಂತೆ ಹಲವರಿಗೆ ವಂಚನೆ ಮಾಡಿದ್ದಾನೆ ಎಂದು ವಿವರಿಸಿದ್ದಾರೆ.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ