Home / ರಾಜಕೀಯ / ಸಾಧನೆ ಶ್ರಮಿಕರ ಸ್ವತ್ತು ರಾಜ್ಯ ಕ್ರೈಡಲ್ ಎಮ್.ಡಿ. ಮಹಾಂತೇಶ ಹಿರೇಮಠ ಅಭಿಮತ

ಸಾಧನೆ ಶ್ರಮಿಕರ ಸ್ವತ್ತು ರಾಜ್ಯ ಕ್ರೈಡಲ್ ಎಮ್.ಡಿ. ಮಹಾಂತೇಶ ಹಿರೇಮಠ ಅಭಿಮತ

Spread the love

ವೈಜ್ಞಾನಿಕ ಕೊಡುಗೆಗಳಿಂದ ಜಗತ್ತು ಅಂಗೈಯಲ್ಲಿ ಹಿಡಿಯಲು ಸಾಧ್ಯವಾಗಿದೆ. ಇಂಥಹ ವಿಶೇಷತೆಗಳನ್ನು ಕೊಡಲು ಶ್ರಮ ಅತ್ಯಗತ್ಯ. ಸಾಧನೆಗಳು ಶ್ರಮಿಕರ ಸ್ವತ್ತಾಗಿದೆ ಎಂದು ರಾಜ್ಯ ಕ್ರೈಡಲ್ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಹಿರೇಮಠ ಹೇಳಿದರು.

ಅವರು ಶನಿವಾರ ಬೆಂಗಳೂರಿನ ಭೂಸೇನಾ ನಿಗಮದ ಕೇಂದ್ರ ಕಚೇರಿಯಲ್ಲಿ ಅಕ್ಕತಂಗೇರಹಾಳ ಗ್ರಾಮದ ಐ.ಐ.ಎಸ್.ಸ್ಸಿ. ಪಿ.ಎಚ್.ಡಿ ಸಾಧಕ , ಚೇತನ ಉರಬಿನಹಟ್ಟಿ ಅವರಿಂದ ಸನ್ಮಾನಿಸಿ ಸ್ವೀಕರಿಸಿ ಮಾತನಾಡಿದರು.

ಜಗತ್ತಿನ ಹೆಸರಾಂತ ತಾಂತ್ರಿಕ ಸಂಸ್ಥೆಗಳಲ್ಲಿ ಅಗ್ರಮಾನ್ಯ ಹೆಸರು ಭಾರತೀಯ ವಿಜ್ಞಾನ ಸಂಸ್ಥೆಗಿದೆ. ಇಂಥಹ ಸಂಸ್ಥೆ ಯಿಂದ ಪಿ.ಎಚ್.ಡಿ. ಪಡೆಯುವದು ಸುಲಭದ ಮಾತಲ್ಲ. ಅದು ಸತತ ಅಧ್ಯಯನ ಶೀಲ ಶ್ರಮಿಕರಿಂದ ಮಾತ್ರ ಸಾಧ್ಯ. ಅದನ್ನು ಚೇತನ ಸಾಧಿಸಿದ್ದು ನಮಗೆಲ್ಲ ಹೆಮ್ಮೆ ಎಂದರಲ್ಲದೆ, ಈ ಸಾಧನೆಯು ನಾಡಿಗೇ ಸ್ಪೂರ್ತಿ ಎಂದರು.

ಹಾವೇರಿಯ ಹೆಸರಾಂತ ಶಸ್ತ್ರಚಿಕಿತ್ಸಾ ತಜ್ಞ ವೈದ್ಯ ವೀರಾಪೂರ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯ ಡಾ. ಬಸವರಾಜ ವೀರಾಪೂರ , ಮಾತನಾಡಿ ಹೆಸರು ಮಾಡಲು ಶ್ರಮಿಸುವದು ಬೇಡ. ಏನಾದರೊಂದು ಸಮಾಜಕ್ಕೆ ಒಳ್ಳೆಯದನ್ನು ಕೊಡುವ ಮನಸ್ತಿತಿ ಇದ್ದರೆ ಸಾಕು, ಅದು ನಮ್ಮ ಹೆಸರನ್ನು ಸಮಾಜದಲ್ಲಿ ಶಾಶ್ವತವಾಗಿರುವಂತೆ ಮಾಡುವದು ಎಂದರಲ್ಲದೆ, ಚೇತನ ಇಂಥಹ ಕಾರ್ಯ ಮಾಡಿದ್ದು ಸಾಧನೆಗೆ ಅಭಿನಂದಿಸಿ, ಶ್ಲ್ಯಾಘಿಸಿದರು. ಖ್ಯಾತ ದಂತ ವೈದ್ಯ ಡಾ. ಮಂಜುನಾಥ ಕಡ್ಡಿ ಮತ್ತು ಸುರೇಶ ಉರಬಿನಹಟ್ಟಿ ಉಪಸ್ತಿತರಿದ್ದರು.


Spread the love

About Laxminews 24x7

Check Also

ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Spread the love ಬೆಂಗಳೂರು: ಬ್ಯಾಂಕ್‌ ಉದ್ಯೋಗಕ್ಕಾಗಿ(Bank Job) ಹುಡುಕಾಟ ನಡೆಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಭಾರತದ ಪ್ರಮುಖ ಖಾಸಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ