Breaking News

ನಗರದ ಸಮಾದೇವಿಗಲ್ಲಿಯಲ್ಲಿರುವ ಪಟ್ಟಣಶೆಟ್ಟಿ ಸ್ಯ್ಕಾನಿಂಗ್ ಸೆಂಟರ್ ಸೇರಿದಂತೆ ತಾಲೂಕಿನಾದ್ಯಂತ ಸ್ಕ್ಯಾನಿಂಗ್ ಸೆಂಟರ್ ಗಳ‌ ಮೇಲೆ‌ ಬೆಳಗಾವಿ ಟಿಎಚ್ಒ ಡಾ.ಶಿವಾನಂದ ಮಾಸ್ತಿಹೊಳಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಸ್ಕ್ಯಾನಿಂಗ್ ಸೆಂಟರ್ ನಡೆಸಲು ಅನುಮತಿ ಪಡೆದಿದೆಯೋ? ಇಲ್ಲವೋ? ಎಂಬ ಬಗ್ಗೆ ಮಾಹಿತಿ, ಗರ್ಭಿಣಿಯ ಮಾಹಿತಿ ಒಳಗೊಂಡಿರುವ ದಾಖಲೆ ಪತ್ರಗಳ ಪರಿಶೀಲನೆ, ಜೊತೆಗೆ ಭ್ರೂಣ ಪತ್ತೆ ಅಪರಾಧ ಎಂಬ ಭಿತ್ತಿ ಪತ್ರ ಅಂಟಿಸಿರುವ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ.ದಾಳಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಟಿಎಚ್ಒ ಡಾ.ಶಿವಾನಂದ ಮಾಸ್ತಿಹೊಳಿ, ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾರ್ಗದರ್ಶನದಲ್ಲಿ ಬೆಳಗಾವಿ ತಾಲೂಕಿನ ಎಲ್ಲ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದೇವೆ. ದಾಖಲೆಗಳು ಸರಿ ಇದೆಯೋ ಇಲ್ಲವೋ ಅನ್ನೋದನ್ನು ಪರಿಶೀಲನೆ ಮಾಡಿದ್ದೇವೆ. ರಿಜಿಸ್ಟರ್ ಬುಕ್, ಎಫ್ ಫಾರ್ಮೆಟ್, ಗರ್ಭಿಣಿ ತಪಾಸಣೆ ಮಾಡುವಾಗ ಮಷಿನ್ ರಿಜಿಸ್ಟರ್ ಇದ್ದ ಬಗ್ಗೆ, ಎಪ್ ಫಾರ್ಮೆಟ್ ಸರಿಯಾಗಿ ಸಲ್ಲಿಕೆ ಬಗ್ಗೆ ಇದರ ಜೊತೆಗೆ ಯಾವುದೇ ಕಾರಣಕ್ಕೆ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಭ್ರೂಣ ಲಿಂಗ ಪತ್ತೆ ಮಾಡಬಾರದು. ತಾಯಿ‌ ಮತ್ತು ಮಗುವಿನ ಆರೋಗ್ಯವನ್ನ ಮಾತ್ರ ತಪಾಸಣೆ ಮಾಡಬೇಕು. ಐದು ತಂಡದಲ್ಲಿ 120ಕ್ಕೂ ಅಧಿಕ ಸೆಂಟರ್ ಗಳಲ್ಲಿ ತಪಾಸಣೆ ಮಾಡುತ್ತೇವೆ. ಇಲ್ಲಿಯವರೆಗೆ ಬೆಳಗಾವಿ ತಾಲೂಕಿನ ಅಂತಹ ಸ್ಕ್ಯಾನಿಂಗ್ ಸೆಂಟರ್ ಕಂಡುಬಂದಿಲ್ಲ. ತಾಲೂಕಿನಲ್ಲಿ ಎಲ್ಲ ರೀತಿಯಲ್ಲಿ ವ್ಯವಸ್ಥಿತವಾಗಿ ಸ್ಕ್ಯಾನಿಂಗ್ ಸೆಂಟರ್ ಕಾರ್ಯ ನಡೆಸುತ್ತಿವೆ ಎಂದು ಹೇಳಿದರು.

Spread the love

ಬೆಳಗಾವಿ: ಮೂಡಲಗಿ ಪಟ್ಟಣದಲ್ಲಿ ಏಳು ಭ್ರೂಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನಲ್ಲಿರುವ 100ಕ್ಕೂ ಅಧಿಕ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ತಾಲೂಕಾ ವೈದ್ಯಾಧಿಕಾರಿ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಲಾಗಿದೆ‌. ಮೂಡಲಗಿ ಪಟ್ಟಣದಲ್ಲಿ ಭ್ರೂಣಗಳು ಪತ್ತೆಯಾಗಿರುವುದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ಜಿಲ್ಲಾಡಳಿತ ಜಿಲ್ಲೆಯ ಎಲ್ಲ ತಾಲೂಕಿನ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ದಿಢೀರ್ ದಾಳಿ ನಡೆಸಿದೆ.

ನಗರದ ಸಮಾದೇವಿಗಲ್ಲಿಯಲ್ಲಿರುವ ಪಟ್ಟಣಶೆಟ್ಟಿ ಸ್ಯ್ಕಾನಿಂಗ್ ಸೆಂಟರ್ ಸೇರಿದಂತೆ ತಾಲೂಕಿನಾದ್ಯಂತ ಸ್ಕ್ಯಾನಿಂಗ್ ಸೆಂಟರ್ ಗಳ‌ ಮೇಲೆ‌ ಬೆಳಗಾವಿ ಟಿಎಚ್ಒ ಡಾ.ಶಿವಾನಂದ ಮಾಸ್ತಿಹೊಳಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಸ್ಕ್ಯಾನಿಂಗ್ ಸೆಂಟರ್ ನಡೆಸಲು ಅನುಮತಿ ಪಡೆದಿದೆಯೋ? ಇಲ್ಲವೋ? ಎಂಬ ಬಗ್ಗೆ ಮಾಹಿತಿ, ಗರ್ಭಿಣಿಯ ಮಾಹಿತಿ ಒಳಗೊಂಡಿರುವ ದಾಖಲೆ ಪತ್ರಗಳ ಪರಿಶೀಲನೆ, ಜೊತೆಗೆ ಭ್ರೂಣ ಪತ್ತೆ ಅಪರಾಧ ಎಂಬ ಭಿತ್ತಿ ಪತ್ರ ಅಂಟಿಸಿರುವ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ.

ದಾಳಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಟಿಎಚ್ಒ ಡಾ.ಶಿವಾನಂದ ಮಾಸ್ತಿಹೊಳಿ, ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾರ್ಗದರ್ಶನದಲ್ಲಿ ಬೆಳಗಾವಿ ತಾಲೂಕಿನ ಎಲ್ಲ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದೇವೆ. ದಾಖಲೆಗಳು ಸರಿ ಇದೆಯೋ ಇಲ್ಲವೋ ಅನ್ನೋದನ್ನು ಪರಿಶೀಲನೆ ಮಾಡಿದ್ದೇವೆ. ರಿಜಿಸ್ಟರ್ ಬುಕ್, ಎಫ್ ಫಾರ್ಮೆಟ್, ಗರ್ಭಿಣಿ ತಪಾಸಣೆ ಮಾಡುವಾಗ ಮಷಿನ್ ರಿಜಿಸ್ಟರ್ ಇದ್ದ ಬಗ್ಗೆ, ಎಪ್ ಫಾರ್ಮೆಟ್ ಸರಿಯಾಗಿ ಸಲ್ಲಿಕೆ ಬಗ್ಗೆ ಇದರ ಜೊತೆಗೆ ಯಾವುದೇ ಕಾರಣಕ್ಕೆ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಭ್ರೂಣ ಲಿಂಗ ಪತ್ತೆ ಮಾಡಬಾರದು. ತಾಯಿ‌ ಮತ್ತು ಮಗುವಿನ ಆರೋಗ್ಯವನ್ನ ಮಾತ್ರ ತಪಾಸಣೆ ಮಾಡಬೇಕು. ಐದು ತಂಡದಲ್ಲಿ 120ಕ್ಕೂ ಅಧಿಕ ಸೆಂಟರ್ ಗಳಲ್ಲಿ ತಪಾಸಣೆ ಮಾಡುತ್ತೇವೆ. ಇಲ್ಲಿಯವರೆಗೆ ಬೆಳಗಾವಿ ತಾಲೂಕಿನ ಅಂತಹ ಸ್ಕ್ಯಾನಿಂಗ್ ಸೆಂಟರ್ ಕಂಡುಬಂದಿಲ್ಲ. ತಾಲೂಕಿನಲ್ಲಿ ಎಲ್ಲ ರೀತಿಯಲ್ಲಿ ವ್ಯವಸ್ಥಿತವಾಗಿ ಸ್ಕ್ಯಾನಿಂಗ್ ಸೆಂಟರ್ ಕಾರ್ಯ ನಡೆಸುತ್ತಿವೆ ಎಂದು ಹೇಳಿದರು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ