Breaking News

ಒಂದೇ ಕುಟುಂಬದ ಒಂಬತ್ತು ಮಂದಿಯ ಆತ್ಮಹತ್ಯೆ

Spread the love

ಸಾಂಗ್ಲಿ: ಸಾಂಗ್ಲಿ ಜಿಲ್ಲೆಯ ಎರಡು ಮನೆಗಳಲ್ಲಿ ಒಂದೇ ಕುಟುಂಬದ ಒಂಬತ್ತು ಮಂದಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ. ಬಂಧಿಸಲ್ಪಟ್ಟವರು ಕುಟುಂಬಕ್ಕೆ ಸಾಲ ನೀಡಿದವರಾಗಿದ್ದಾರೆ.

ಮಣಿಕ್‌ ವಾನ್ಮೋರೆ ಮತ್ತು ಪೋಪರ್‌ ವಾನ್ಮೋರೆ ಸದಸ್ಯರು ತಮ್ಮ ಪತ್ನಿಯರು, ಮಕ್ಕಳು ಮತ್ತು ತಾಯಿಯೊಂದಿಗೆ ಸೋಮವಾರ ಮಹೈಸಲ್‌ ಪಟ್ಟಣದ ತಮ್ಮ ಮನೆಗಳಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಸಹೋದರರ ಮನೆಗಳು ಒಂದು ಕಿಮೀ ಅಂತರದಲ್ಲಿವೆ.

ಮಣಿಕ್‌ ಮನೆಯಲ್ಲಿ ಆರು ಮಂದಿ ಮೃತಪಟ್ಟಿದ್ದರೆ,ಮೂವರು ಪೋಪಟ್‌ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಒಂದು ಮನೆಯಲ್ಲಿ ಪತ್ತೆಯಾದ ಸುಸೈಡ್‌ ನೋಟ್‌ನಲ್ಲಿ ಸಾಲದ ಹೊರೆ ಹಾಗೂ ಸಾಲಗಾರರ ಉಪಟಳದಿಂದ ಈ ಕ್ರಮಕೈಗೊಂಡಿದ್ದಾಗಿ ಬರೆಯಲಾಗಿದೆ.

ಈ ಸೋದರರು ಸಾಲ ಪಡೆದುಕೊಂಡಿದ್ದ 25 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಇವರಲ್ಲಿ 13 ಮಂದಿಯನ್ನು ಬಂಧಿಸಲಾಗಿದ್ದು ಇವರಲ್ಲಿ ಕೆಲವರು ಈಗಾಗಲೇ ಸಾಲ ಪಡೆದವರನ್ನು ಪೀಡಿಸಿದ ಕುರಿತಾದ ಪ್ರಕರಣಗಳಿವೆ.

ಸೋದರರು ತಮ್ಮ ಸಾಲದ ಮೇಲಿನ ಬಡ್ಡಿಯನ್ನುನಿಯಮಿತವಾಗಿ ಪಾವತಿಸುತ್ತಿದ್ದರೂ ಸಾಲಗಾರರು ಕಿರುಕುಳ ನೀಡಿ ಸಾರ್ವಜನಿಕವಾಗಿ ನಿಂದಿಸುತ್ತಿದ್ದರೆಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದು ಅವಮಾನ ಹಾಗೂ ಕಿರುಕುಳ ಸಹಿಸಲು ಅಸಾಧ್ಯವಾದಾಗ ಕುಟುಂಬಗಳು ಆತ್ಮಹತ್ಯೆಗೆ ಮೊರೆ ಹೋಗಿವೆ ಎಂದಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ