Breaking News

ಮೈಸೂರು-ಬೆಳಗಾವಿ ರೈಲು ಸಂಚಾರ ಭಾಗಶಃ ರದ್ದು

Spread the love

ಹುಬ್ಬಳ್ಳಿ: ಬೆಳಗಾವಿ-ಸುಲಧಾಳ ವಿಭಾಗ ನಡುವೆ ನಡೆಯುತ್ತಿರುವ ಜೋಡು ಮಾರ್ಗ ಕಾಮಗಾರಿ ನಿಮಿತ್ತ ವಿಶ್ವಮಾನವ ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ ರೈಲು ಭಾಗಶಃ ರದ್ದುಗೊಳಿಸಲಾಗಿದೆ. ಜೂ.22ರಿಂದ 28ರ ವರೆಗೆ ಮೈಸೂರು-ಬೆಳಗಾವಿ ವಿಶ್ವಮಾನವ ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ (17326) ರೈಲು ಧಾರವಾಡ ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಬೆಳಗಾವಿ ಬದಲು ಧಾರವಾಡಕ್ಕೆ ಕೊನೆಗೊಳ್ಳಲಿದೆ.

 

23ರಿಂದ 29ರ ವರೆಗೆ ಬೆಳಗಾವಿ-ಮೈಸೂರು (17325) ರೈಲು ಬೆಳಗಾವಿ ಮತ್ತು ಧಾರವಾಡ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಬೆಳಗಾವಿ ಬದಲು ಧಾರವಾಡದಿಂದ ಹೊರಡಲಿದೆ.

ಹೆಚ್ಚುವರಿ ಬೋಗಿ ಅಳವಡಿಕೆ: ನೈಋತ್ಯ ರೈಲ್ವೆಯು ಎಂಟು ರೈಲುಗಳಿಗೆ ಹೆಚ್ಚುವರಿಯಾಗಿ ಶಾಶ್ವತ ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ.

ಜೂ. 19ರಿಂದ ಬೆಂಗಳೂರು-ಚೆನ್ನೈ ಸೆಂಟ್ರಲ್‌-ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್‌ (12028/12027) ರೈಲಿಗೆ ಒಂದು ಎಸಿ ಚೇರ್‌ ಹಾಗೂ 20ರಿಂದ ಯಶವಂತ ಪುರ-ಶಿವಮೊಗ್ಗ ಟೌನ್‌-ಯಶವಂತಪುರ ಡೇಲಿ ಎಕ್ಸ್‌ಪ್ರೆಸ್‌ (16579/15580) ಗೆ ಎರಡು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಬೆಳಗಾವಿ- ಮೈಸೂರು-ಬೆಳಗಾವಿ ವಿಶ್ವಮಾನವ ಡೇಲಿ ಎಕ್ಸ್‌ಪ್ರೆಸ್‌ (17325/17326)ಗೆ ಒಂದು ದ್ವಿತೀಯ ದರ್ಜೆ ಚೇರ್‌ ಕಾರ್‌ ಹಾಗೂ 21ರಿಂದ ಬೆಂಗಳೂರು-ಶಿವಮೊಗ್ಗ ಟೌನ್‌-ಬೆಂಗಳೂರು ಡೇಲಿ ಜನಶತಾಬ್ದಿ ಎಕ್ಸ್‌ಪ್ರೆಸ್‌ (12089/12090)ಗೆ ಎರಡು ದ್ವಿತೀಯ ದರ್ಜೆ ಚೇರ್‌ ಕಾರ್

23ರಿಂದ ಯಶವಂತಪುರ-ಕೊ ಚಿವೇಲಿ-ಯಶವಂತಪುರ ವೀಕ್ಲಿ ಸುಪರ್‌ ಫಾಸ್ಟ್‌ ಎಕ್ಸ್‌ ಪ್ರಸ್‌ (22677/22678) ಗೆ ಒಂದು ಎಸಿ-3 ಟೈರ್‌ ಹಾಗೂ 25ರಿಂದ ಯಶವಂತಪುರ-ದೆಹಲಿ ಸರಾಇ ರೋಹಿಲ್ಲಾ-ಯಶವಂತಪುರ ವೀಕ್ಲಿ ಡುರೊಂಟೊ ಎಕ್ಸ್‌ಪ್ರೆಸ್‌ (12213/12214) ಗೆ ಒಂದು ಎಸಿ-3 ಟೈರ್‌ ಹಾಗೂ 27ರಿಂದ ಯಶವಂತಪುರ-ಶಿವಮೊಗ್ಗ ಟೌನ್‌ -ಯಶವಂತಪುರ ಟ್ರಿ-ವೀಕ್ಲಿ ಎಕ್ಸ್‌ ಪ್ರೆಸ್‌ (16581/16582)ಗೆ ಎರಡು ದ್ವಿತೀಯ ದರ್ಜೆ ಸ್ಲಿಪರ್‌ ಹಾಗೂ ಜು. 4ರಿಂದ ವಾಸ್ಕೊ ಡಾ ಗಾಮಾ-ನಾಗಪಟ್ಟಣಂ-ವಾಸ್ಕೊ ಡಾ ಗಾಮಾ ವೀಕ್ಲಿ ಎಕ್‌ ಪ್ರೆಸ್‌ (17315/17316)ಗೆ ಒಂದು ದ್ವಿತೀಯ ದರ್ಜೆ ಸ್ಲಿಪರ್‌ ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ.


Spread the love

About Laxminews 24x7

Check Also

ನಾಗನೂರು ಪಟ್ಟಣದಲ್ಲಿ ವಿಭಾಗ ಹಾಗೂ ರಾಜ್ಯಮಟ್ಟದ ಖೋ ಖೋ ಟೂರ್ನಿಯಲ್ಲಿ ಸಂಸದೆ ಪ್ರಿಯಾಂಕ ಜಾರಕಿಹೊಳಿ ಭಾಗಿ

Spread the love ನಾಗನೂರು ಪಟ್ಟಣದಲ್ಲಿ ವಿಭಾಗ ಹಾಗೂ ರಾಜ್ಯಮಟ್ಟದ ಖೋ ಖೋ ಟೂರ್ನಿಯಲ್ಲಿ ಸಂಸದೆ ಪ್ರಿಯಾಂಕ ಜಾರಕಿಹೊಳಿ ಭಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ