ಗದಗ: ಸಾಮಾನ್ಯವಾಗಿ ಹಾವು ಮುಂಗುಸಿಗೆ ಆಗಿ ಬರಲ್ಲ ಅಂತ ಕೇಳಿದ್ದೇವೆ. ಹಾವು- ಮುಂಗುಸಿ ಕಾಳಗವನ್ನೂ ನೋಡಿದ್ದೇವೆ. ಆದ್ರೆ, ವಿಷಕಾರಿ ಹಾವಿನ ಜೊತೆ ನಾಯಿಯೊಂದು ಕಾದಾಟ ನಡೆಸಿದ ಅಪರೂಪದ ಕಾಳಗ ನೋಡಿ ಇಡೀ ಗ್ರಾಮಸ್ಥರೇ ದಂಗಾಗಿ ಹೋಗಿದ್ದಾರೆ.
ಹೌದು, ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ರೈತ ಶೇಖಪ್ಪ ಚಲವಾದಿ ಎಂಬುವರು ಮಧ್ಯಾಹ್ನ ಊಟ ತೆಗೆದುಕೊಂಡು ಜಮೀನಿಗೆ ಬರಬೇಕಾದರೆ ತಮ್ಮ ಸಾಕು ನಾಯಿ ಸಹ ಓಡೋಡಿ ಬರ್ತಿತ್ತು. ಊಟ ತೆಗೆದುಕೊಂಡು ಬರ್ತಿರೋದನ್ನ ನೋಡಿ ನಾಯಿ ಓಡೋಡಿ ಬರ್ತಿದೆ ಅಂತ ತಿಳ್ಕೊಂಡಿದ್ದ ಶೇಖಪ್ಪನಿಗೆ ಅಚ್ಚರಿ ಕಾದಿತ್ತು.
ನಾಗರಹಾವು-ನಾಯಿ ನಡುವಿನ ಕಾದಾಟಜಮೀನಿನಲ್ಲಿ ಹರಿದಾಡ್ತಿದ್ದ ಹಾವು ಕಂಡು ಗುರುಗುಟ್ಟಿಗೊಂಡು ಬಂದ ನಾಯಿ, ಅದನ್ನ ಬೇಟೆಯಾಡಲು ಬೆನ್ನಟ್ಟಿದೆ. ತನ್ನ ಬೆನ್ನಟ್ಟಿ ಬಂದ ನಾಯಿಗೆ ನಾಗರಹಾವು ಸಹ ತಿರುಗಿ ಬುಸುಗುಡುತ್ತ ಹೆಡೆ ಎತ್ತಿ ನಿಂತಿದೆ. ಕ್ಷಣಾರ್ಧದಲ್ಲಿ ಇಬ್ಬರಿಗೂ ‘ಬಾಯಿ ಕಾಳಗ’ ಶುರುವಾಗಿದೆ. ಒಂದಕ್ಕೊಂದು ಬಾಯಿ ಕಚ್ಚೋದಕ್ಕೆ ಶುರು ಮಾಡಿವೆ. ಈ ರೋಚಕ ಕಾಳಗ ಕಂಡು ರೈತ ಶೇಖಪ್ಪ ಒಂದು ಕ್ಷಣ ದಂಗಾಗಿ ಹೋದರು. ಜಗಳ ಬಿಡಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ನಾಯಿ ಗುರ್ ಗುರ್ ಅಂತ ಹಾವಿನ ಮೇಲೆ ಅಟ್ಯಾಕ್ ಮಾಡಿದ್ರೆ, ಇತ್ತ ಹಾವು ಕೂಡ ನಾಯಿ ಮೇಲೆ ಬುಸ್ ಬುಸ್ ಅಂತ ಅಟ್ಯಾಕ್ ಮಾಡ್ತಾಯಿತ್ತು. ಕೊನೆಗೆ ಕಾಳಗದಲ್ಲಿ ಎರಡೂ ಪ್ರಾಣಿಗಳು ಪ್ರಾಣ ಬಿಟ್ಟಿವೆ.