ಹಣದ ಪ್ರವಾಹ ಹಾಗೂ ರಾಜಕೀಯ ಷಡ್ಯಂತ್ರದ ನಡುವೆಯೂ ನನ್ನ ಪರವಾಗಿ ಮತ ಚಲಾಯಿಸಿದ ಶಿಕ್ಷಕರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇನ್ನು ಈ ಚುನಾವಣೆಯಲ್ಲಿ ನಾನು ಸೋಲನ್ನು ಕಂಡಿದ್ದು ನಾನದನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸುತ್ತೇನೆ ಎಂದು ಸೋತ ಅಭ್ಯರ್ಥಿ ಅರುಣ್ ಶಹಾಪೂರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ವಾಯವ್ಯ ಶಿಕ್ಷಕರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅರುಣ್ ಶಹಾಪೂರ್, ನನ್ನ ಪರವಾಗಿ ಮತ ಚಲಾವಣೆ ಮಾಡಿರುವ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಣದ ಪ್ರವಾಹ, ರಾಜಕೀಯ ಷಡ್ಯಂತ್ರದಿಂದ ನನಗೆ ಸೋಲುಂಟಾಗಿದೆ.
ಈ ಸೋಲಿನಿಂದ ಸಾಕಷ್ಟು ಪಾಠ ಕಲಿತಿದ್ದ ಸೋಲನ್ನ ಸ್ಪರ್ಧಾತ್ಮಕವಾಗಿ ಸ್ವೀಕಾರ ಮಾಡ್ತೇನಿ.
ಪಕ್ಷದ ಎಲ್ಲರೂ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಪ್ರಜಾತಂತ್ರದಲ್ಲಿ ನಂಬಿಕೆ ಇದೆ, ಶಿಕ್ಷಕರ ಪರವಾಗಿ ಇದ್ದೇನೆ. ಶಿಕ್ಷಕರು ಹಣಕ್ಕೆ ಮಾರಾಟ ಮಾಡಿಕೊಂಡಿದ್ದಾರೆ ಅನೋದಿಲ್ಲ. ಸೋಲಿಗೆ ಕಾರಣ, ಆತ್ಮಾವಲೋಕ ಮಾಡಿಕೊಳ್ಳುತ್ತೇವೆ. ಹಣ ಹೊಳೆ ಹರಿಸಿದ್ದರಿಂದ ಹಾಗೂ ವಿರೋಧ ಪಕ್ಷಗಳ ರಾಜಕೀಯ ಷಡ್ಯಂತ್ರಕ್ಕೆ ಸೋಲುಂಟಾಗಿದೆ ಎಂದರು.
Laxmi News 24×7