ಹಲವು ವಾರಗಳಿಂದ ನಿರಂತರವಾಗಿ ಏರಿಕೆಯಾಗಿದ್ದ ಟೊಮೆಟೊ ಬೆಲೆ ಈ ವಾರ ಇಳಿಕೆ ಕಂಡಿದ್ದು, ಗ್ರಾಹಕರು ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.
ನಗರಕ್ಕೆ ಕೊಪ್ಪಳ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಟೊಮೆಟೊ ಬರುತ್ತದೆ.
ಎರಡ್ಮೂರು ವಾರ ಅಲ್ಪ ಮಳೆಯಾಗಿದ್ದರಿಂದ ಬೆಳೆದಿದ್ದ ಟೊಮೆಟೊದಲ್ಲಿ ಕೆಲವೊಂದಿಷ್ಟು ಕೆಟ್ಟು ಹೋಗಿದ್ದವು. ಕಳೆದ ವಾರದಿಂದ ಮಳೆ ಇಲ್ಲ. ಹೀಗಾಗಿ ಈಗ ಬೆಲೆ ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಚಿಲ್ಲರೆ ಮಾರುಕಟ್ಟೆಯಲ್ಲಿ ನಗರದಲ್ಲಿ ಹೋದ ವಾರ ಒಂದು ಕೆ.ಜಿ. ಟೊಮೆಟೊಗೆ ₹80 ಇದ್ದ ಬೆಲೆ ಈಗ ₹50ರಿಂದ ₹60ಕ್ಕೆ ಇಳಿಕೆಯಾಗಿದೆ.
ಉಳಿದಂತೆ ಉಳ್ಳಾಗಡ್ಡಿ ಪ್ರತಿ ಕೆ.ಜಿ.ಗೆ. ₹20, ಹಿರೇಕಾಯಿ ₹30, ಬೆಂಡೇಕಾಯಿ ₹30 ಮತ್ತು ಸೌತೇಕಾಯಿ ₹30 ಪ್ರತಿ ಕೆ.ಜಿ.ಗೆ ಮಾರಾಟ ಮಾಡಲಾಗುತ್ತಿದೆ. ಬಿಸಿಲು ಹೆಚ್ಚಿದ್ದ ಕಾರಣ ₹10ಕ್ಕೆ ಮೂರರಿಂದ ನಾಲ್ಕು ಲಿಂಬೆಹಣ್ಣುಗಳನ್ನು ಮಾತ್ರ ಕೊಡಲಾಗುತ್ತಿತ್ತು. ಈಗ ಐದರಿಂದ ಆರು ಮಾರಾಟ ಮಾಡಲಾಗುತ್ತಿದೆ.