ಬೆಂಗಳೂರು: ಇಂದು ಸೋಮವಾರ ಪ್ರಧಾನಿ ಮೋದಿ ಜೊತೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಈ ವೇಳೆ ಬಹುತೇಕ ರಾಜ್ಯಗಳು ಲಾಕ್‌ಡೌನ್ ವಿಸ್ತರಣೆಗೆ ಒಲವು ತೋರಿಸಿದ್ದಾರೆ. ಕರ್ನಾಟಕದದಿಂದ ವಲಯವಾರು ವಿಸ್ತರಣೆ ಮಾಡಿ ಲಾಕ್‌ಡೌನ್ ಮುಂದುವರೆಸುವ ಮನವಿ ಮಾಡಲಾಗಿದೆ. ಅಲ್ಲದೇ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ
ಅವಕಾಶ ನೀಡುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ.
ಹೌದು ದೇಶದಲ್ಲಿ ಮೇ. 3ಕ್ಕೆ ಎರಡನೇ ಹಂತದ ಲಾಕ್‌ಡೌನ್ ಅಂತ್ಯವಾಗಲಿದ್ದು, ಮುಂದೇನು? ಲಾಕ್‌ಡೌನ್ ವಿಸ್ತರಿಸೋದಾ ಅಥವಾ ಅಂತ್ಯ ಮಾಡೋದಾ? ಎಂಬ ಕುರಿತಾಗಿ ಪ್ರಧಾನಿ ಮೋದಿ ಎಲ್ಲಾ ರಾಜ್ಯದ ಸಿಎಂಗಳ ಜೊತೆ ಸಂವಾದ ನಡೆಸಿದ್ದಾರೆ. ಈಗಾಗಲೇ ದೆಹಲಿ ಸೇರಿ ಒಟ್ಟು ಆರು ರಾಜ್ಯಗಳು ಲಾಕ್‌ಡೌನ್ ವಿಸ್ತರಿಸಿದ್ದು, ಇನ್ನೂ ಐದು ರಾಜ್ಯಗಳು ಲಾಕ್‌ಡೌನ್ ಮುಂದುವರೆಸುವಂತೆ ಸೂಚಿಸಿವೆ.ಆದರೆ ಆರ್ಥಿಕ ಹೊಡೆತ ಅನುಭವಿಸುತ್ತಿರುವ ರಾಜ್ಯಗಳು ಕೊಂಚ ಸಡಿಲಿಕೆಯನ್ನೂ ಮಾಡುವಂತೆ ಕೋರಿವೆ. ಹೀಗಿರುವಾಗ ಗ್ರಾಮೀಣ ಭಾಗ ಹಾಗೂ ಕೆಲ ಕ್ಷೇತ್ರಗಳಲ್ಲಿ ಲಕ್‌ಡೌನ್ ಸಡಿಲಿಸುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಈ ವಾರಾಂತ್ಯದೊಳಗೆ ಪಿಎಂ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡುವ ಮೂಲಕ ಸ್ಪಷ್ಟ ನಿರ್ಧಾರ ತಿಳಿಸಲಿದ್ದಾರೆ.
ಪಂಜಾಬ, ಗುಜರಾತದಲ್ಲಿ ಮಧ್ಯ ಮಾರಾಟಕ್ಕೆ ಅನುಮತಿಯಿಲ್ಲ ಎಂದು ಪ್ರಕಟಿಸುತ್ತಿದ್ದಂತೆ ಕರ್ನಾಟಕ ಕೂಡಾ ಈ ಅಭಿಪ್ರಾಯವನ್ನು ಬೆಂಬಲಿಸಿದ್ದು ಕರ್ನಾಟಕದಲ್ಲಿ ಮೇ. 15ರವರೆಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡುವುದಿಲ್ಲ ಎಂದು ಸಿಎಂ ಬಿಎಸ್ ವೈ ತಿಳಿಸಿದರು.
Laxmi News 24×7