ಸಿಂದಗಿ(ವಿಜಯಪುರ): ಅಕ್ಕ ಹಾಗೂ ತಮ್ಮನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ.
ಸದ್ಯ ನಾನಾಗೌಡ ಯರಗಲ್ಲ ಹಾಗೂ ರಾಜಶ್ರೀ ಯರಗಲ್ಲ ಕೊಲೆಯಾದವರಾಗಿದ್ದು,ಶಂಕರಲಿಂಗ ಬಿರಾದಾರ ಹತ್ಯೆಗೈದಿರುವ ಆರೋಪಿ ಎಂದು ತಿಳಿದು ಬಂದಿದೆ.
ಅಂದ ಹಾಗೇ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಕ್ಕನ ಗಂಡ ಶಂಕರಲಿಂಗ ಬಿರಾದಾರ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಇನ್ನು ವಿಷಯ ತಿಳಿದು ಘಟನಾ ಸ್ಥಳಕ್ಕೆ ಸಿಂದಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Laxmi News 24×7