Breaking News

ಕಿಯಾ ಕ್ಯಾರೆನ್ಸ್ ಕಾರನ್ನು ಖರೀದಿಸಬೇಡಿ! ಗ್ರಾಹಕನಿಂದಲೇ ಗ್ರಾಹಕರಿಗೆ ಎಚ್ಚರಿಕೆ

Spread the love

ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ತನ್ನದೇ ಆದ ಗ್ರಾಹಕರನ್ನು ಸೆಳೆದುಕೊಳ್ಳುತ್ತಿದೆ.ಕಿಯಾ ಕಾರು ವಿಶೇಷ ಫೀಚರ್ಸ್ ಹೊಂದಿದ್ದು, ಇದೇ ಕಾರಕ್ಕೆ ಗ್ರಾಹಕರು ಈ ಕಾರನ್ನು ಖರೀದಿಸುತ್ತಿದ್ದಾರೆ. ಕಾರು ಅಂದ ಮೇಲೆ ಕೆಲವರು ಅದರ ಫೀಚರ್ಸ್ಗೆ ಮಾರು ಹೋಗಿ ಖರೀದಿಸುತ್ತಾರೆ. ಆದರೆ ಕೆಲವರು ಇದರಿಂದ ಸಮಾಧಾನಗೊಂಡರೆ. ಇನ್ನು ಕೆಲವರು ಅಸಮಾಧಾನಗೊಳ್ಳುತ್ತಾರೆ.

ಅದರಂತೆಯೇ ಗ್ರಾಹಕರೊಬ್ಬರು ಕಿಯಾ ಕ್ಯಾರೆನ್ಸ್ ಕಾರೊಂದನ್ನು ಖರೀದಿಸಿ ಅದರಿಂದ ಅಸಮಧಾನಗೊಂಡು. ಇದೀಗ ಆ ಕಾರನ್ನು ಬಳಸಿಕೊಂಡು ಕಸ ಹೆಕ್ಕಲು ಉಪಯೋಗಿಸುತ್ತಿದ್ದಾರೆ. ಅದರೊಂದಿಗೆ ಈ ಕಾರನ್ನು ಖರೀದಿಸದಂತೆ ಮಾಹಿತಿ ರವಾನಿಸುತ್ತಿದ್ದಾರೆ.

ಕಿಯಾ ಕ್ಯಾರೆನ್ಸ್ ಮಾಲೀಕನು ವಾಹನದ ಹಿಂಭಾಗಕ್ಕೆ ಬ್ಯಾನರ್​ವೊಂದನ್ನು ಅಂಟಿಸಿಕೊಂಡಿದ್ದು, ಅದರ ಮೂಲಕ ಈ ಕಾರನ್ನು ಖರೀದಿಸಬೇಡಿ ಮತ್ತು ತನಗಾದ ಅಸಮಧಾನದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.

ಸದ್ಯ ಘಟನೆಯು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಆದರೆ ಈ ಕ್ರಮದ ಹಿಂದಿನ ಕಾರಣ ತಿಳಿದಿಲ್ಲ. “ಕಿಯಾ ಕಾರುಗಳನ್ನು ಖರೀದಿಸಲು ಬಯಸುವವರು ಎಚ್ಚರದಿಂದಿರಿ, ನಾನು ಕಿಯಾ ಕ್ಯಾರೆನ್ಸ್ ಅನ್ನು 19 ಲಕ್ಷ ರೂ.ಗೆ ಖರೀದಿಸಿದ್ದೇನೆ” ಎಂಬ ಬ್ಯಾನರ್ನೊಂದಿಗೆ ಕಾರಿನ ಮಾಲೀಕರು ಓಡಾಡುತ್ತಿದ್ದಾರೆ. ಜೊತೆಗೆ ಫೋನ್ ಸಂಖ್ಯೆಯನ್ನು ಕೆಳಭಾಗದಲ್ಲಿ ಹಂಚಿಕೊಂಡಿದ್ದಾರೆ.


Spread the love

About Laxminews 24x7

Check Also

ಬೆಂಗಳೂರು -ವಿಜಯಪುರ ರೈಲು ಸಂಚಾರಕ್ಕೆ ಹೊಸ ದಿಕ್ಕು! : ಸಚಿವ ಎಂ.ಬಿ.ಪಾಟೀಲ

Spread the love ಬೆಂಗಳೂರು -ವಿಜಯಪುರ ರೈಲು ಸಂಚಾರಕ್ಕೆ ಹೊಸ ದಿಕ್ಕು! : ಸಚಿವ ಎಂ.ಬಿ.ಪಾಟೀಲ ಕ್ರಿಸ್ಮಸ್ ಮತ್ತು ವರ್ಷಾಂತ್ಯದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ