Breaking News

ನಿರಾಣಿ ಗ್ರುಪ್ ದೇಶದಲ್ಲಿ ಮೊದಲನೇ ಗ್ರುಪ್ ಎಂಬುದು ನಿಶ್ಚಿತವಾಗಿದೆ. ಈವರೆಗೆ 72 ಸಾವಿರ ಜನರಿಗೆ ನಾವು ಉದ್ಯೋಗ ಕೊಟ್ಟಿದ್ದೇವೆ.

Spread the love

ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರಿಗೆ ನಿರಾಣಿ ಗ್ರುಪ್ ದೇಶದಲ್ಲಿ ಮೊದಲನೇ ಗ್ರುಪ್ ಎಂಬುದು ನಿಶ್ಚಿತವಾಗಿದೆ. ಈವರೆಗೆ 72 ಸಾವಿರ ಜನರಿಗೆ ನಾವು ಉದ್ಯೋಗ ಕೊಟ್ಟಿದ್ದೇವೆ. 20 ವರ್ಷದ ಅವಧಿಯಲ್ಲಿ 72 ಸಾವಿರ ಉದ್ಯೋಗ ಕೊಡುವುದು ಸಣ್ಣ ಮಾತಲ್ಲ. ಕೆಲಸ ಮಾಡಲು ಇನ್ನು ಕಾಲಾವಕಾಶವಿದೆ. ಎಲ್ಲಾ ರಂಗಗಳಲ್ಲಿ ಕೆಲಸ ಮಾಡುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ ನಾವು ಗ್ರಾಮೀಣ ಭಾಗದಿಂದ ಬಂದು 20 ವರ್ಷಗಳ ಹಿಂದೆ ಅತ್ಯಂತ ಚಿಕ್ಕ ಕಾರ್ಖಾನೆಯನ್ನು ಆರಂಭಿಸಿ ಇಂದು ಇಡೀ ದೇಶಕ್ಕೆ ಅತೀ ಹೆಚ್ಚು ಸಕ್ಕರೆ ಉತ್ಪಾದಿಸುವ ಮತ್ತು ಅತೀ ಹೆಚ್ಚು ಎಥನಾಲ್ ಉತ್ಪಾದಿಸುವ ಘಟಕ ಬೆಳಗಾವಿ ವಿಭಾಗದಲ್ಲಿ ಆರಂಭವಾಗಿರೋದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಬೆಳಗಾವಿ ವಿಭಾಗ ಅಷ್ಟೇ ಅಲ್ಲದೇ ಮೈಸೂರು ಭಾಗದಲ್ಲಿ ಮೂರು ಕಾರ್ಖಾನೆಗಳು ಹಾಗೂ ಪುಣೆಯಲ್ಲಿ ಒಂದು ಕಾರ್ಖಾನೆಯನ್ನು ನಿರಾಣಿ ಗ್ರುಪ್‍ನಿಂದ ಆರಂಭಿಸಿದ್ದೇವೆ.

ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರು ಆ ಭಾಗದ ಜನರಿಗೆ ಅನುಕೂಲ ಮಾಡುವ ಉದ್ದೇಶದಿಂದ ನಾವು ಯಾವುದೇ ರಾಜ್ಯ, ಜಿಲ್ಲೆಗಳು, ದೇಶಗಳ ಮೇಲೆ ಅವಲಂಬಿತರಾಗದೇ ನಮಗೆ ಬೇಕಾದ ಎಲ್ಲ ವಸ್ತುಗಳನ್ನು ನಮ್ಮ ಜಿಲ್ಲೆಯಲ್ಲಿಯೇ ತಯಾರಿಸಬೇಕು ಎಂಬ ಗುರಿಯನ್ನು ಇಟ್ಟುಕೊಂಡು 150 ಕಾರ್ಖಾನೆಗಳನ್ನು ಆರಂಭಿಸಿದ್ದರು. 150 ವರ್ಷಗಳ ಹಿಂದೆಯೇ ನಮಗೊಂದು ಪಾಠವನ್ನು ಹಾಕಿ ಕೊಟ್ಟು ಮುಂಚೂಣಿಯಲ್ಲಿದ್ದಾರೆ. ಅವರು ನಮಗೆ ಆದರ್ಶವಾಗಿದ್ದಾರೆ. ಮುಂದಿನ ದಿನಗಳಲ್ಲಿ ನೀರಾವರಿ, ಶಿಕ್ಷಣ, ಬ್ಯಾಂಕಿಂಗ್, ಉದ್ಯೋಗ ನೀಡುವುದು ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡಲಿದ್ದೇವೆ. ನಮಗೆ ಬೇಕಾದ 21 ಕಾರ್ಖಾನೆಗಳನ್ನು ಮಾಡಿ, 72 ಸಾವಿರ ಜನರಿಗೆ ಉದ್ಯೋಗ ಕೊಟ್ಟಿದ್ದೇವೆ ಎಂದರು.

ಎಷ್ಟು ಉದ್ಯೋಗ ಕೊಡಬೇಕು ಅಷ್ಟು ಕೊಟ್ಟಿಲ್ಲ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಯಿಸಿದ ಮುರುಗೇಶ್ ನಿರಾಣಿ ನಾವು ಅವರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ವರ್ಡ ಎಕಾನಮಿ ಫೋರಂನವರು ಮತ್ತು ಎಫ್‍ಡಿಎಫ್‍ನವರು ಮಾಡಿದ ಸರ್ವೇಯಲ್ಲಿ ನಾಲ್ಕು ತ್ರೈಮಾಸಿಕದಲ್ಲಿ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಮೊದಲನೇ ಸ್ಥಾನದಲ್ಲಿದ್ದೇವೆ. ಇದರಲ್ಲಿ ಶೇ.42ರಷ್ಟು ನಮ್ಮ ಶೇರ್ ಇದೆ. ಇನ್ನುಳಿದ ಶೇ.58ರಷ್ಟು ಶೇರ್‍ನಲ್ಲಿ 30 ರಾಜ್ಯಗಳ ಶೇರ್ ಇದೆ. ಇದಕ್ಕೆ ಕಾಂಗ್ರೆಸ್‍ನವರು ಏನು ಉತ್ತರ ಕೊಡುತ್ತಾರೆ. ಕಾಂಗ್ರೆಸ್‍ನವರು ಇದ್ದಾಗ ಯಾವ ಸ್ಥಾನದಲ್ಲಿತ್ತು ಎಂದು ಪ್ರಶ್ನಿಸಿದರು.

ಆರ್‍ಎಸ್‍ಎಸ್ ಬಗ್ಗೆ ಕಾಂಗ್ರೆಸ್ ನಾಯಕರ ಟೀಕೆಗೆ ಸ್ವಂತ ಜೀವನವನ್ನು ತ್ಯಾಗ ಮಾಡಿ ಇಡೀ ದೇಶದ ಸಲುವಾಗಿ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡು ಹಗಲು ರಾತ್ರಿ ಕೆಲಸ ಮಾಡುತ್ತಾರೆ. ಅವರೇನು ಫೈವ್‍ಸ್ಟಾರ್ ಹೋಟೆಲ್‍ನಲ್ಲಿ ಇರೋದಿಲ್ಲ, ವಿಮಾನದಲ್ಲಿ ಓಡಾಡೋದಿಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ರೀತಿಯಲ್ಲಿ ಜೀವನ ಮಾಡುತ್ತಾರೆ. ಇವರ ಬಗ್ಗೆ ಮಾತನಾಡಲು ಬೇರೆ ಯಾರಿಗೂ ನೈತಿಕಕತೆ ಇಲ್ಲ ಎಂದು ನಿರಾಣಿ ಕಿಡಿಕಾರಿದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ