Breaking News

ಡಾ.ರಾಜ್​ಕುಮಾರ್ ಅಕಾಡೆಮಿಯಿಂದ 8 ಮಂದಿ U.P.S.C. ಪಾಸ್:

Spread the love

ಕೇಂದ್ರ ಲೋಕಸೇವಾ ಆಯೋಗ (UPSC) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ಪರೀಕ್ಷೆಯನ್ನು ನಡೆಸಿತ್ತು. 2021ನೇ ಸಾಲಿನ ಈ ಪರೀಕ್ಷೆಯ ಫಲಿತಾಂಶ ಇಂದು ( ಮೇ 30) ಪ್ರಕಟವಾಗಿದೆ. ಈ ಅತ್ಯುನ್ನತ ಪರೀಕ್ಷೆಯಲ್ಲಿ ದೇಶದ ಸುಮಾರು 685 ಮಂದಿ ತೇರ್ಗಡೆಯಾಗಿದ್ದಾರೆ.

 

2021ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದಿಂದ 27 ಮಂದಿ ತೇರ್ಗಡೆಯಾಗಿದ್ದರ ಬಗ್ಗೆ ಇದೂವರೆಗೂ ಮಾಹಿತಿ ಸಿಕ್ಕಿದೆ. ವಿಶೇಷ ಅಂದರೆ ಇವರಲ್ಲಿ ಡಾ.ರಾಜ್​ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ 8 ಮಂದಿ ಕೂಡ ಸೇರಿಕೊಂಡಿದ್ದಾರೆ.

ಯುಪಿಎಸ್‌ಸಿಗೆ ಡಾ.ರಾಜ್‌ಕುಮಾರ್ ಅಕಾಡೆಮಿ ತರಬೇತಿ

ಡಾ.ರಾಜ್​ಕುಮಾರ್ ಅಕಾಡೆಮಿ ಹಲವು ವರ್ಷಗಳಿಂದ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ಅಕಾಡೆಮಿ ಸಿವಿಲ್ ಸರ್ವೀಸ್ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದು, ಪ್ರತಿ ವರ್ಷ ಈ ಅಕಾಡೆಮಿಯಿಂದ ಹಲವು ಮಂದಿ ಉತ್ತಮ ರ್‍ಯಾಂಕ್ ಪಡೆದು ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಿದ್ದಾರೆ ಅದರಂತೆ, ಈ ಬಾರಿ ಕೂಡ 8 ಮಂದಿ ಇದೇ ಅಕಾಡೆಮಿಯಿಂದ ತೇರ್ಗಡೆಯಾಗಿದ್ದಾರೆ.

ಡಾ.ರಾಜ್​ಕುಮಾರ್ ಅಕಾಡೆಮಿಯಿಂದ ತೇರ್ಗಡೆಯಾದವರ ಪಟ್ಟಿ

ಬೇನಕ ಪ್ರಸಾದ್ 92ನೇ ರ್‍ಯಾಂಕ್

ಮೇಘನಾ ಕೆ ಟಿ 425ನೇ ರ್‍ಯಾಂಕ್

ರಾಜೇಶ್ ಪೊನ್ನಪ್ಪ 222ನೇ ರ್‍ಯಾಂಕ್

ಪ್ರೀತಿ ಪಂಚಾಲ್ 449ನೇ ರ್‍ಯಾಂಕ್

ಪ್ರಶಾಂತ್ ಕುಮಾರ್ ಬಿಓ 641 ನೇ ರ್‍ಯಾಂಕ್

ರವಿನಂದನ್ ಬಿಎಂ 455ನೇ ರ್‍ಯಾಂಕ್

ನಿಖಿಲ್ ಬಿ ಪಾಟೀಲ್ 139ನೇ ರ್‍ಯಾಂಕ್

ದೀಪಕ್ ಆರ್ ಸೇಟ್ 311ನೇ ರ್‍ಯಾಂಕ್

ದೃಷ್ಟಿ ಸಮಸ್ಯೆಯ ಮೇಘನಾ 2ನೇ ಬಾರಿನೂ ಪಾಸ್

ಡಾ.ರಾಜ್​ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯಿಂದ ಯುಪಿಎಸ್​ಸಿ ಪಾಸ್ ಆದವರಲ್ಲಿ ಮೇಘನಾ ಎಂಬುವವರಿಗೆ ಪೂರ್ಣ ಪ್ರಮಾಣದಲ್ಲಿ ಕಣ್ಣುಕಾಣುವುದಿಲ್ಲ. ಇವರು 425ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಈ ಹಿಂದೆ ಕೂಡ ಇದೇ ಅಕಾಡೆಮಿಯಲ್ಲಿ ಪರೀಕ್ಷೆ ಬರೆದು 465ನೇ ರ್‍ಯಾಂಕ್ ಪಡೆದಿದ್ದರು. ಮೇಘನಾ ಮೂಲತಃ ಮೈಸೂರು ಜಿಲ್ಲೆಯ ಪರಿಯಾಪಟ್ಟಣದವರಾದ ಮೇಘನಾ ದೃಷ್ಟಿ ಸಮಸ್ಯೆಯ ಹೊರತಾಗಿಯೂ ಯುಪಿಎಸ್​ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.


Spread the love

About Laxminews 24x7

Check Also

ಮೇಶ್ ಜಾರಕಿಹೊಳಿ ವಿರುದ್ಧ ಸುಳ್ಳು ಸುದ್ದಿ: ₹20 ಕೋಟಿ ಮಾನನಷ್ಟ ಕೇಸ್‌

Spread the loveಬೆಳಗಾವಿ: ಅಸ್ತಿತ್ವದಲ್ಲಿ ಇಲ್ಲದ ಖಾಸಗಿ ಮಾಧ್ಯಮದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಆರೋಗ್ಯದ ಬಗ್ಗೆ ಇಲ್ಲಸಲ್ಲದ ಸುದ್ದಿಯನ್ನು ಅಪಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ