: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿನ ಅಕ್ರಮ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಶಾಂತಿಬಾಯಿ ದಂಪತಿ ಕೊನೆಗೂ ಸಿಕ್ಕಿಬಿದ್ದಿದ್ದಾರೆ.
2021ರ ಅಕ್ಟೋಬರ್ 3ರಂದು ನಡೆದ 545 ಎಸ್‌ಐ ನೇಮಕಾತಿಗೆ ರಾಜ್ಯದಲ್ಲಿ 92 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿತ್ತು.
ಲಿಖಿತ ಪರೀಕ್ಷೆ ಬಳಿಕ ಅಕ್ರಮ ನಡೆದಿರುವ ಕುರಿತು ದೂರುಗಳು ದಟ್ಟವಾಗಿ ಕೇಳಿಬಂದ ಹಿನ್ನೆಲೆ ಏಪ್ರಿಲ್ 7ರಂದು ಅಕ್ರಮ ಕುರಿತು ಸಿಐಡಿ ತನಿಖೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಆದೇಶಿಸಿದರು. ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳುತ್ತಿದ್ದಂತೆ ಅಕ್ರಮ ಬಗೆದಷ್ಟು ಆಳ ಎಂಬಂತೆ ಬಯಲಾಗುತ್ತಲೇ ಇದೆ. ಅಕ್ರಮದ ಉರುಳು ಪ್ರಮುಖ ಘಟಾನುಘಟಿಗಳನ್ನೇ ಸುತ್ತಿಕೊಂಡಿದೆ. ಈಗಾಗಲೇ ಕಿಂಗ್ಪಿನ್, ಏಜೆಂಟ್, ಮಧ್ಯವರ್ತಿಗಳು, ಅಭ್ಯರ್ಥಿಗಳು ಸೇರಿದಂತೆ ಹಲವರನ್ನ ಸಿಐಡಿ ಬಂಧಿಸಿದೆ. ಇದೇ ಪ್ರಕರಣದಲ್ಲಿ ಆರೋಪಿಗಳ ಪಟ್ಟಿಯಲ್ಲಿ ಹೆಸರಿದ್ದ ಶಾಂತಿಬಾಯಿ ಮತ್ತು ಈಕೆಯ ಗಂಡ ಬಸ್ಯಾ ನಾಯಕ್ ತಲೆ ಮರೆಸಿಕೊಂಡಿದ್ದರು. ಒಂದೂವರೆ ತಿಂಗಳಿನಿಂದ ತಲೆ ಮರೆಸಿಕೊಂಡ ಮಹಿಳಾ ಅಭ್ಯರ್ಥಿ ಶಾಂತಿಬಾಯಿ ಕೊನಗೂ ಸಿಕ್ಕಿಬಿದ್ದಿದ್ದಾಳೆ.
Laxmi News 24×7