ಕುಂದಾಪುರ: ವಿದೇಶಗಳಲ್ಲಿ ಯುದ್ಧ, ನೆರೆ, ಪ್ರಾಕೃತಿಕ ವಿಪತ್ತು, ಕೊರೊನಾದಂತಹ ಸಂಕಷ್ಟ ಮಯ ಸಂದರ್ಭಗಳಲ್ಲಿ ಅಲ್ಲಿ ನೆಲೆಸಿರುವ ರಾಜ್ಯದ ಜನರು, ವಿದ್ಯಾರ್ಥಿಗಳಿಗೆ ತುರ್ತು ನೆರವಾಗಲು ಸ್ಥಾಪನೆಯಾಗಿರುವ ಅನಿವಾಸಿ ಭಾರತೀಯ ಸಮಿತಿ (ಎನ್‌ಆರ್‌ಐ ಫೋರಂ)ಗೆ ನಾಲ್ಕು ವರ್ಷಗಳಿಂದ ಉಪಾಧ್ಯಕ್ಷರೇ ಇಲ್ಲ.
ಈ ಸಮಿತಿಗೆ ಮುಖ್ಯಮಂತ್ರಿಗಳು ಅಧ್ಯಕ್ಷರು. ಇದರ ಕಾರ್ಯಭಾರವೆಲ್ಲ ಉಪಾಧ್ಯಕ್ಷ ರದ್ದೇ ಆಗಿರುತ್ತದೆ. ಎಲ್ಲವನ್ನು ಮುಖ್ಯಮಂತ್ರಿ ಯವರೇ ನಿಭಾಯಿಸಲು ಅಸಾಧ್ಯ. ಆದ್ದರಿಂದ ಉಪಾಧ್ಯಕ್ಷರ ಹುದ್ದೆಯೇ ಪ್ರಮುಖ.
ಭರ್ತಿ ನಾಲ್ಕು ವರ್ಷ
ಉಡುಪಿ ಮೂಲದ ಆರತಿ ಕೃಷ್ಣ ಅವರು 2018ರ ಮೇ 31ರ ವರೆಗೆ ಉಪಾಧ್ಯಕ್ಷರಾಗಿದ್ದರು, ಅಲ್ಲಿಂದ ಈ ಹುದ್ದೆ ಖಾಲಿಯಿದೆ. ಅಂದರೆ ಈ ವರ್ಷದ ಮೇ 31ಕ್ಕೆ ಈ ಹುದ್ದೆಗೆ ಹೊಸಬರ ನೇಮಕವಾಗದೆ ಭರ್ತಿ ನಾಲ್ಕು ವರ್ಷಗಳಾಗುತ್ತವೆ.
2008ರಲ್ಲಿ ಆರಂಭ
ರಾಜ್ಯದಿಂದ ಉದ್ಯೋಗಕ್ಕಾಗಿ ತೆರಳಿರುವವರು, ಶಿಕ್ಷಣಕ್ಕಾಗಿ ಹೋಗಿರುವ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಏನಾದರೂ ಸಮಸ್ಯೆ ಎದುರಾದರೆ ತುರ್ತಾಗಿ ಸ್ಪಂದಿಸಿ, ನೆರವಾಗುವ ಉದ್ದೇಶದಿಂದ 2008ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ಎನ್‌ಆರ್‌ಐ ಫೋರಂ ಆರಂಭಿಸಲಾಗಿತ್ತು. ಆದರೆ ಕೊರೊನಾ ಸಂಕಷ್ಟ, ಮೊನ್ನೆಯ ಉಕ್ರೇನ್ – ರಷ್ಯಾ ಯುದ್ಧ ಪರಿಸ್ಥಿತಿಯ ವೇಳೆ ಕ್ರಿಯಾಶೀಲವಾಗಿರಬೇಕಿದ್ದ ಎನ್‌ಆರ್‌ಐ ಫೋರಂ ನಿಷ್ಕ್ರಿಯವಾಗಿತ್ತು. ಮುಖ್ಯವಾಗಿ ಉಪಾಧ್ಯಕ್ಷರಿಲ್ಲದುದೇ ಇದಕ್ಕೆ ಕಾರಣ.
ಸಂಪುಟ ದರ್ಜೆ ಸ್ಥಾನ
ಎನ್ನಾರೈ ಸಮಿತಿಯ ಉಪಾಧ್ಯಕ್ಷ ಹುದ್ದೆ ಸಂಪುಟ ದರ್ಜೆ ಸ್ಥಾನಮಾನದ್ದಾಗಿದ್ದು, 2008- 12ರ ವರೆಗೆ ಮಂಗಳೂರಿನ ಕ್ಯಾ| ಗಣೇಶ್ ಕಾರ್ಣಿಕ್, 2013-2016ರ ವರೆಗೆ ವಿ.ಸಿ. ಪ್ರಕಾಶ್ ಹಾಗೂ 2016 – 2018ರ ವರೆಗೆ ಆರತಿ ಕೃಷ್ಣ ಅವರು ಉಪಾಧ್ಯಕ್ಷರಾಗಿದ್ದರು.
ಮಾಹಿತಿಯೇ ಇಲ್ಲ