Breaking News

ವೇದಿಕೆಯ ಮೇಲೆ ಹಾಡುತ್ತಲೇ ಕುಸಿದುಬಿದ್ದು ಸಂಗೀತದಲ್ಲಿ ಲೀನರಾದ ಖ್ಯಾತ ಗಾಯಕ-

Spread the love

ತಿರುವನಂತಪುರ (ಕೇರಳ): ಕಲೆಯನ್ನು ಆರಾಧಿಸುವ ಕಲಾವಿದರು ಅದೇ ಕಲೆಯ ಪ್ರದರ್ಶನ ನೀಡುತ್ತಿರುವಾಗಲೇ ಮೃತಪಟ್ಟಿರುವ ಘಟನೆಗಳನ್ನು ಆಗಾಗ್ಗೆ ಕೇಳುತ್ತಲೇ ಇರುತ್ತವೆ. ಕಲೆಯನ್ನೇ ಉಸಿರಾಗಿಸಿಕೊಂಡವರು ಅಥವಾ ತಮ್ಮ ಕೆಲಸವನ್ನು ತುಂಬಾ ಪ್ರೀತಿಯಿಂದ ನಿರ್ವಹಿಸುವವರು ಕರ್ತವ್ಯದಲ್ಲಿ ಇರುವಾಗಿ ಏಕಾಏಕಿ ಮೃತಪಡುವ ಘಟನೆಗಳು ನಡೆಯುತ್ತಲೇ ಇರುತ್ತವೆ.

 

ಅಂಥದ್ದೇ ಒಂದು ಸಾವು ಖ್ಯಾತ ಗಾಯಕ ಎಡವ ಬಶೀರ್ ಅವರದ್ದು. ಮಲಯಾಳ ಚಿತ್ರದ ಹಿನ್ನೆಲೆ ಗಾಯಕರಾಗಿ ಬಹಳ ಪ್ರಸಿದ್ಧಿ ಪಡೆದಿರುವ ಬಶೀರ್​ ಅವರು, ಕೇರಳದ ಅಲಪ್ಪುಳದಲ್ಲಿ ನಡೆದ ‘ಬ್ಲೂ ಡೈಮಂಡ್ ಆರ್ಕೆಸ್ಟ್ರಾ’ದ ಸುವರ್ಣ ಮಹೋತ್ಸವದಲ್ಲಿ ಹಾಡುತ್ತಿದ್ದಾಗಲೇ ಕುಸಿದು ಮೃತಪಟ್ಟಿದ್ದಾರೆ. ಎದೆನೋವು ಕಾಣಿಸಿ ಕುಸಿದುಬಿದ್ದ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದರು.

ಯೇಸುದಾಸ್ ಮತ್ತು ಮುಹಮ್ಮದ್ ರಫಿ ಅವರ ಹಾಡುಗಳಿಂದ ಬಶೀರ್ ಜನರ ಹೃದಯ ಗೆದ್ದಿದ್ದರು. ಸಂಗೀತ ಕಾರ್ಯಕ್ರಮಗಳನ್ನು ಜನಪ್ರಿಯಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಇಲ್ಲಿದೆ ನೋಡಿ ವಿಡಿಯೋ:


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ