ಬೆಂಗಳೂರು : ಕಾಂಗ್ರೆಸ್ ನ ಜೊತೆಗೆ ಬಿಜೆಪಿಯಲ್ಲೂ ವಿಧಾನಪರಿಷತ್ ಸ್ಥಾನ ಕೈತಪ್ಪಿದ ಅಸಮಧಾನ ನಿಧಾನಕ್ಕೆ ಹೊಗೆಯಾಡಲಾರಂಭಿಸಿದೆ. ತಮಗೆ ವಿಧಾನಪರಿಷತ್ ಸ್ಥಾನ ಕೈ ತಪ್ಪಿದ್ದಕ್ಕೇ ಪರೋಕ್ಷವಾಗಿ ಅಸಮಧಾನ
ತೋರಿಸಿಕೊಂಡಿರೋ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra), ಹಾಸನದಲ್ಲಿ ನಡೆದ ಸಮಾರಂಭದಲ್ಲಿ ಪಕ್ಕಾ ರಾಜಕೀಯ ಭಾಷಣ ಮಾಡಿದ್ದು, ಪರೋಕ್ಷವಾಗಿ ಬಿಜೆಪಿ ಬಿ.ಎಸ್.ಯಡಿಯೂರಪ್ಪ (Yeddyurappa ) ಬಿಟ್ಟು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ.
ಅಷ್ಟೇ ಅಲ್ಲ ಬಿಎಸ್ವೈ ವಿರುದ್ಧದ ಷಡ್ಯಂತ್ರಗಳಿಗೆ ಹೆದರೋದಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ.