ಬೆಂಗಳೂರು: ಖಾಸಗಿ ಸ್ಕೂಲ್ ಬಸ್ ಮತ್ತು ಬೈಕ್ ನಡುವೆ ನಗರದ ಬನಶಂಕರಿಯಲ್ಲಿ ಗುರುವಾರ ಭೀಕರ ಅಪಘಾತ ಸಂಭವಿಸಿದ್ದು, 16 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಹಾರೋಹಳ್ಳಿಯ ಕೀರ್ತನ ಮೃತ ದುರ್ದೈವಿ. ಇತ್ತೀಚಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದ ಕೀರ್ತನ ಮತ್ತು ಹರ್ಷಿತಾ ಇಬ್ಬರೂ ಕನಕಪುರ ರಸ್ತೆಯ ನೆಟ್ಟಿಗೆರೆ ಬಳಿಯ ಅಕ್ಕನ ಮನೆಗೆ ಬುಧವಾರ ತೆರಳಿದ್ದರು.
ಗುರುವಾರ ಬೆಳಗ್ಗೆ ನಾಗರಬಾವಿಯ ಸರ್ಕಾರಿ ಕಾಲೇಜಿಗೆ ಸೇರಲೆಂದು ಸ್ನೇಹಿತ ದರ್ಶನ್ನ ಬೈಕ್ನಲ್ಲಿ ತ್ರಿಬಲ್ ರೈಡಿಂಗ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಬನಶಂಕರಿಯ ಕಿತ್ತೂರು ರಾಣಿ ಚೆನ್ನಮ್ಮ ಫ್ಲೈ ಓವರ್ ಬಳಿ ವೇಗವಾಗಿ ಬಂದ ಡೆಲ್ಲಿ ಪಬ್ಲಿಕ್ ಶಾಲೆಯ ವ್ಯಾನ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗಂಭೀರ ಗಾಯಗೊಂಡ ಕೀರ್ತನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
Laxmi News 24×7