Breaking News

ಕಾಯಿಲೆಯಿದೆ ಎಂದು ಮಗುವನ್ನು ಬಿಟ್ಟು ಹೋದ ಘಟನೆ ನಗರದ ಫ್ಯಾಕ್ಟರಿ ಸರ್ಕಲ್‍ನಲ್ಲಿ ಇರುವ ಚರ್ಚ್‍ನಲ್ಲಿ ನಡೆದಿದೆ.

Spread the love

ಮಂಡ್ಯ: ಕಾಯಿಲೆಯಿದೆ ಎಂದು ಮಗುವನ್ನು ಬಿಟ್ಟು ಹೋದ ಘಟನೆ ನಗರದ ಫ್ಯಾಕ್ಟರಿ ಸರ್ಕಲ್‍ನಲ್ಲಿ ಇರುವ ಚರ್ಚ್‍ನಲ್ಲಿ ನಡೆದಿದೆ.

ನಮಗೆ ಒಂದು ಹೊತ್ತಿನ ಊಟವಿಲ್ಲದಿದ್ದರೂ ಪರವಾಗಿಲ್ಲ. ಮಗುವಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕು. ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಅದೇಷ್ಟೋ ತಂದೆ ತಾಯಿಗಳು ಹೊಟ್ಟೆ ಬಟ್ಟೆ ಕಟ್ಟಿ ತಮ್ಮ ಮಕ್ಕಳಿಗೋಸ್ಕರ ಬದುಕುತ್ತಿದ್ದಾರೆ. ಅಂತಹದರಲ್ಲಿ ತಮ್ಮ ಮಗುವಿಗೆ ಕಾಯಿಲೆ ಇದೆ ಎಂದು ಆ ಮಗುವನ್ನು ಅನಾಥ ಮಾಡಿ ಪೋಷಕರು ಬಿಟ್ಟು ಹೋಗಿದ್ದು, ಇತ್ತ ತಂದೆ ತಾಯಿಗಳ ಲಾಲನೆ ಪಾಲನೆ ಇಲ್ಲದೇ ಮಗು ಒದ್ದಾಡುತ್ತಿದೆ.

ಇಂದು ಬೆಳಗ್ಗೆ 6:30ರ ವೇಳೆಗೆ ನಗರದ ಫ್ಯಾಕ್ಟರಿ ಸರ್ಕಲ್‍ನಲ್ಲಿ ಇರುವ ಚರ್ಚ್‍ನಲ್ಲಿ ಪೋಷಕರು ಮಗುವನ್ನು ಅನಾಥವಾಗಿ ಬಿಟ್ಟು ಹೋಗಿದ್ದಾರೆ. ಇದನ್ನು ಕಂಡ ಚರ್ಚ್‍ನ ಸಿಬ್ಬಂದಿ ಆ ಕಂದಮ್ಮನನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿದ್ದಾರೆ.


Spread the love

About Laxminews 24x7

Check Also

ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ: ಅಧ್ಯಕ್ಷ ರವಿಕುಮಾರ್‌ ಕೊನೆಗೂ ರಾಜೀನಾಮೆ

Spread the loveಬೆಂಗಳೂರು, (ಸೆಪ್ಟೆಂಬರ್ 05): ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ (Bhovi Development Corporation) ಅಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ