ಸಾರ್ವಜನಿಕ ಬಳಿ ಲಂಚಕ್ಕೆ ಬೇಡಿಕೆಇಟ್ಟು ಹಣ ಪೀಕುತ್ತಿದ್ದ ಲಂಚಬಾಕ ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ.ಹೌದು ರಾಯಬಾಗ್ ತಾಲೂಕಿನ ಚಿಂಚಲಿ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಜಗದೀಶ್ ಕಿತ್ತೂರ ಎಂಬವ ಸಾರ್ವಜನಿಕವಾಗಿ ಕೆಲಸಮಾಡುತ್ತಿದ್ದ ವೇಳೆ ಜನರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ. ದಿನಾಂಕ: 18.05.2022 ರಂದು ಗ್ರಾಮ ಲೆಕ್ಕಾಧಿಕಾರಿ ಲಂಚ ಕೇಳುತ್ತಿದ್ದಾರೆ ಎಂದು ಗಣಕೋಡಿಯ ಸಚೀನ್ ಶಾಂತಿನಾಥ ಶಿಂಧೆ ಎಸಿಬಿಗೆ ದೂರು ನೀಡಿದ್ದರು.
ವೇಳೆ ಸಚಿನ್ ಶಿಂಧೆ ರವರಿಂದ 5ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಚಿಂಚಲಿ ಗ್ರಾಮಲೆಕ್ಕಾಧಿಕಾರಿ ಜಗದೀಶ್ ಕಿತ್ತೂರ್ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಲಂಚದ ಹಣವನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿರುತ್ತದೆ. ಬಿ.ಎಸ್. ನೇಮಗೌಡ, ಪೊಲೀಸ್ ಅಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ, ಉತ್ತರ ವಲಯ, ಬೆಳಗಾವಿ ರವರ ಮಾರ್ಗದರ್ಶನದಲ್ಲಿ ಪಿರ್ಯಾದಿಯವರು .ಈ ಬಗ್ಗೆ ನೀಡಿದ ಜೆ.ಎಮ್.ಕರುಣಾಕರ ಶೆಟ್ಟಿ, ಪೊಲೀಸ್ ಉಪಾಧೀಕ್ಷಕರವರು ದೂರನ್ನು ದಾಖಲಿಸಿಕೊಂಡಿದ್ದಾರೆ. ಶಿ ್ರೀ ನಿರಂಜನ್ ಎಂ. ಪಾಟೀಲ್, ಪೊಲೀಸ್ ನಿರೀಕ್ಷಕರು ಇದ್ದರೂ
Laxmi News 24×7