Breaking News

ಮುಸ್ಲಿಂ ಯುವತಿ ಜೊತೆ ಪ್ರೀತಿ.. ಈಗ ಮತ್ತೊಬ್ಬ ಯುವಕನನ್ನು ಹತ್ಯೆ ಮಾಡಿದ ಯುವತಿ ಸಂಬಂಧಿಕರು

Spread the love

ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಹಿಂದೂ ಯುವಕನ್ನ ಬರ್ಬರವಾಗಿ ಕೊಚ್ಚಿಕೊಂದ ಘಟನೆ ಇತ್ತೀಚೆಗೆ ಹೈದ್ರಾಬಾದ್​​ನಲ್ಲಿ ನಡೆದಿತ್ತು. ಈ ಕ್ರೂರ ಕೃತ್ಯಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಇದೀಗ ಅಂತಹುದೇ ಮತ್ತೊಂದು ಪ್ರಕರಣ ಗುಜರಾತ್​ನ ರಾಜ್​ಕೋಟ್​​ನಲ್ಲಿ ನಡೆದಿದೆ.

ಏನಿದು ಪ್ರಕರಣ..? 
ಮುಸ್ಲಿಂ ಯುವತಿಯನ್ನ ಪ್ರೀತಿ ಮಾಡಿದ್ದಕ್ಕೆ ಆಕ್ರೋಶಗೊಂಡ ಹುಡುಗಿಯ ಸಂಬಂಧಿಕರು 22 ವರ್ಷದ ಮಿಥುನ್ ಎಂಬ ಯುವಕನನ್ನ ಹೊಡೆದು ಸಾಯಿಸಿದ್ದಾರೆ. ಯುವಕ ಮಿಥುನ್,  ಸುಮೈಯಾ (Sumaiya) ಎಂಬ ಮುಸ್ಲಿಂ ಯುವತಿಯನ್ನ ಪ್ರೀತಿಸುತ್ತಿದ್ದ. ಇದು ಆಕೆಯ ಸಹೋದರನಿಗೆ ಮತ್ತು ಸಂಬಂಧಿಕರಿಗೆ ಇಷ್ಟ ಇರಲಿಲ್ಲ. ಇದಕ್ಕೆ ಕೋಪಿತಗೊಂಡ ಈ ಕುಟುಂಬ ಮಿಥುನ್ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದೆ. ಪರಿಣಾಮ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಆತ್ಮಹತ್ಯೆಗೆ ಯತ್ನಿಸಿದ ಯುವತಿ
ಪ್ರಿಯತಮ ಯಾವಾಗ ಸಾವನ್ನಪ್ಪಿದ್ದಾನೆ ಅನ್ನೋ ವಿಚಾರ ಗೊತ್ತಾಯಿತೋ ಯುವತಿ ಕೂಡ ಆತ್ಮಹತ್ಯೆಗೆ ಮುಂದಾಗಿದ್ದಾಳೆ. ನಂತರ ಆಕೆಯ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾರೆ. ವರದಿಗಳ ಪ್ರಕಾರ, ಮಿಥುನ್ ಠಾಕೂರ್, ಮೂಲತಹ ಬಿಹಾರದವ. ಗುಜರಾತ್​ನ ಲೋಕಲ್ ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಕೆಲವು ತಿಂಗಳಿನಿಂದ ಸುಮಿಯಾ ಕಡಿವರ್ ಎಂಬ ಮುಸ್ಲಿಂ ಹುಡುಗಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ