Breaking News

ಸ್ವಲ್ಪ ಹೊತ್ತು ನೋಡಿಕೊಳ್ಳಿ ಎಂದು ಯುವಕನಿಗೆ 9 ತಿಂಗಳ ಮಗು ಕೊಟ್ಟು ಮಹಿಳೆ ಪರಾರಿ!.. ಮುಂದೇನಾಯ್ತು?

Spread the love

ಮೈಸೂರು: ಮಹಿಳೆಯೊಬ್ಬರು 9 ತಿಂಗಳ ಮಗುವನ್ನು ಯುವಕನ ಕೈಗೆ ಕೊಟ್ಟು ನಾಪತ್ತೆಯಾಗಿದ್ದು, ಬಳಿಕ ಯುವಕ ಕಂದಮ್ಮನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾನೆ.

ಮೈಸೂರಿನ ಯುವಕ ರಘು ವೈಯಕ್ತಿಕ ಕೆಲಸಕ್ಕಾಗಿ ರಾಯಚೂರಿಗೆ ತೆರಳಿದ್ದ. ಕೆಲಸ ಮುಗಿಸಿ ಮೈಸೂರಿಗೆ ಹಿಂದಿರುಗಲೆಂದು ರಾಯಚೂರಿನ ಬಸ್ ನಿಲ್ದಾಣದಲ್ಲಿ ಬಸ್​​ಗಾಗಿ ಕಾಯುತ್ತಿದ್ದ. ಈ ಸಂದರ್ಭದಲ್ಲಿ ಆತನ ಬಳಿ ಬಂದ ಮಧ್ಯವಯಸ್ಕ ಮಹಿಳೆಯೊಬ್ಬಳು ತನ್ನ ಬಳಿಯಿದ್ದ 9 ತಿಂಗಳ ಮಗುವನ್ನು ಆತನ ಕೈಗಿಟ್ಟು ಸ್ವಲ್ಪ ಹೊತ್ತು ನೋಡಿಕೊಳ್ಳಿ, ವಾಪಸ್ ಬರುತ್ತೇನೆ ಎಂದು ಹೇಳಿ ಹೋಗಿದ್ದಾಳೆ.

ಆದರೆ ಎರಡು-ಮೂರು ಗಂಟೆ ಕಳೆದರೂ ಕೂಡ ಆಕೆ ವಾಪಸ್ ಬಂದಿರಲಿಲ್ಲ. ಹೀಗಾಗಿ ರಘು ಮಗುವಿನ ಸಮೇತ ಮೈಸೂರಿಗೆ ಬಂದಿದ್ದಾನೆ. 

ಮೈಸೂರಿನ ಲಷ್ಕರ್ ಠಾಣೆ ಪೊಲೀಸರು ತಾಯಿಯಿಂದ ಬೇರ್ಪಟ್ಟ ಮಗುವನ್ನು ಆರೈಕೆ ಮಾಡಿ, ಬಾಲಮಂದಿರಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾರೆ.


Spread the love

About Laxminews 24x7

Check Also

ಸಾರಿಗೆ ನೌಕರರಿಂದ ಮುಷ್ಕರದ ಘೋಷಣೆ: ಜ. 29 ರಂದು ಬೆಂಗಳೂರು ಚಲೋ

Spread the loveಬೆಂಗಳೂರು: ವೇತನ ಮತ್ತು ವೇತನ ಪರಿಷ್ಕರಣೆಗೆ ಸಂಬಂಧಿಸಿದ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ