Breaking News

ಜಾಗ ಮಾರಾಟ ಹಿನ್ನೆಲೆ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಇಬ್ಬರ ಬಂಧನ

Spread the love

ಮಂಗಳೂರು : ವೃದ್ಧರೋರ್ವರ ಜಾಗ ಮಾರಾಟಕ್ಕೆ ಸಂಬಂಧಿಸಿ ನಕಲಿ ದಾಖಲೆ ಸೃಷ್ಟಿಸಿ 60 ಲ.ರೂ.ಗೂ ಅಧಿಕ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಉಡುಪಿಯ ಅಶೋಕ ಕುಮಾರ್‌(47) ಮತ್ತು ರೇಷ್ಮಾ ವಾಸುದೇವ್‌ ನಾಯಕ್‌ (36) ಎಂಬವರನ್ನು ಬಂಧಿಸಿದ್ದಾರೆ.

 

ಬೆಂಗಳೂರು ಮೂಲದ, ಪ್ರಸ್ತುತ ಬಜಪೆ ಬಳಿ ವಾಸವಿರುವ ಕ್ರಿಸ್ಟಿನ್‌ ಎಡ್ವಿನ್‌ ಜೋಸೆಫ್ ಗೋನ್ಸಾಲ್ವಿಸ್‌(84) ವಂಚನೆಗೊಳಗಾದವರು. ಅವರು ಉಡುಪಿ ಜಿಲ್ಲೆಯ ಮೂಡುತೋನ್ಸೆ ಗ್ರಾಮದಲ್ಲಿ 77 ಸೆಂಟ್ಸ್‌ ಜಾಗ ಹೊಂದಿದ್ದು ಅದನ್ನು ಮಾರಾಟ ಮಾಡಲು ಇಚ್ಛಿಸಿದ್ದರು. ಅದನ್ನು ತಮ್ಮ ಪರಿಚಯದ ರಾಮ ಪೂಜಾರಿ ಎಂಬವರಿಗೆ ಹೇಳಿದ್ದರು.

ಅಶೋಕ್‌ ಕುಮಾರ್‌ ಮತ್ತು ರೇಷ್ಮಾ ನಾಯಕ್‌ ಜಾಗ ಖರೀದಿಸಲು ಆಸಕ್ತಿ ಹೊಂದಿರುವ ಬಗ್ಗೆ ರಾಮ ಪೂಜಾರಿ ತಿಳಿಸಿದ್ದರು. ಅನಂತರ ಕರಾರು ಪತ್ರ ಮಾಡಲಾಗಿತ್ತು. ಆ ಸಂದರ್ಭ ಮುಂಗಡವಾಗಿ ಚೆಕ್‌ ಮೂಲಕ 30 ಲ.ರೂ.ಗಳನ್ನು ನೀಡಿದ್ದು ಉಳಿದ ಹಣವನ್ನು 6 ತಿಂಗಳೊಳಗೆ ನೀಡಿ ಕ್ರಯಪತ್ರ ರಿಜಿಸ್ಟರ್‌ ಮಾಡಿಕೊಳ್ಳುವುದಾಗಿ ತಿಳಿಸಿದ್ದರು.

ಅನಂತರ ಖರೀದಿದಾರರು ಹಣದ ಕೊರತೆ ಇರುವುದರಿಂದ ಮೊದಲು 40 ಸೆಂಟ್ಸ್‌ ನೋಂದಣಿ ಮಾಡಿಸಿ ಹಣ ನೀಡಿ, ಉಳಿದ 37 ಸೆಂಟ್ಸ್‌ ಅನಂತರ ನೋಂದಣಿ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಅವರು ವಂಚಿಸಿ ಎಲ್ಲ 77 ಸೆಂಟ್ಸ್‌ಗೆ ಕ್ರಯಪತ್ರ ಮಾಡಿಸಿದ್ದರು. ಅದಕ್ಕೆ ಪೂರಕವಾಗಿ ವಿವಿಧ ದಾಖಲೆಪತ್ರಗಳನ್ನು ನಕಲಿಯಾಗಿ ಮಾಡಿರುವುದು ಗೊತ್ತಾಗಿದೆ.


Spread the love

About Laxminews 24x7

Check Also

ಕಬ್ಬು ಬೆಳೆಗಾರರ ಜೊತೆ ಸಚಿವರ ಸಂಧಾನ ಸಭೆ ವಿಫಲ: ಮಿನಿಸ್ಟರ್​​ ಕಾರಿಗೆ ರೈತರ ಮುತ್ತಿಗೆ

Spread the loveಚಿಕ್ಕೋಡಿ, ಬೆಳಗಾವಿ: ಕಳೆದ ಏಳು ದಿನಗಳಿಂದ ನಡೆದಿರುವ ಕಬ್ಬು ಬೆಳೆಗಾರರ ಹೋರಾಟ ಕೊನೆಗೊಳಿಸಲು ಸರ್ಕಾರದ ಪರವಾಗಿ ಕಾನೂನು ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ