ಬಾಲಿವುಡ್ ರಾಜಕುಮಾರಿ ಎಂದೇ ಖ್ಯಾತಿಯಾಗಿರುವ ಅದಿತಿ ರಾವ್ ಹೈದರಿ ಹೊಸ ‘ಔಡಿ ಕ್ಯೂ 7’ ಕಾರು ಖರೀದಿಸಿದ್ದಾರೆ.
ಬೋಲ್ಡ್ ಪಾತ್ರ ಹಾಗೂ ಮಾತುಗಳಿಗೆ ಹೆಸರಾಗಿರುವ ಅದಿತಿ ಇದೇ ಮೊದಲ ಬಾರಿಗೆ ಐಷಾರಾಮಿ ಕಾರು ಖರೀದಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಫೋಟೊ ಹಂಚಿಕೊಂಡಿದ್ದಾರೆ.
ಅದಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಅದಿತಿಯ ಹೊಸ ಕಾರು ಖರೀದಿಸಿದ್ದಾರೆ ಅಭಿಮಾನಿಗಳು ಶುಭಾಶಯಗಳನ್ನು ಹೇಳುತ್ತಿದ್ದಾರೆ.
ಈ ಐಷಾರಾಮಿ ಕಾರಿನ ಬೆಲೆ ₹ 96 ಲಕ್ಷದಿಂದ ₹ 1.05 ಕೋಟಿ ಇರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಅದಿತಿ ಬಾಲಿವುಡ್ ಸೇರಿದಂತೆ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.