ವೇಮುರು: ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಆಕೆಯ ಕುಟುಂಬಸ್ಥರು ಅಪಹರಿಸಿರುವ ಘಟನೆ ಆಂಧ್ರ ಪ್ರದೇಶದ ಅನಂತವರಂನಲ್ಲಿ ಸೋಮವಾರ ನಡೆದಿದೆ.
ಆಂಧ್ರ ಪೊಲೀಸರ ಪ್ರಕಾರ ಗುಂಟೂರು ಜಿಲ್ಲೆಯ ಕೊಲ್ಲಿಪರ ಮಂಡಲದ ಲಕ್ಷ್ಮೀ ಪೂಜಿತ ಎಂಬಾಕೆ ಅನಂತಪುರ ಜಿಲ್ಲೆಯ ಕೊಲ್ಲೂರು ವಲಯದ ವಿಶ್ವನಾಥ್ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದಾಳೆ.
ಲಕ್ಷ್ಮೀ ಪೂಜಿತಾ ತೆನಾಲಿ ಬಳಿಯ ಇಂಜಿನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ವಿಶ್ವನಾಥ್ ಅದೇ ಕಾಲೇಜಿನಲ್ಲಿ ಬಸ್ ಚಾಲಕನಾಗಿದ್ದ. ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.
ಇಬ್ಬರು ಕಳೆದ ಏಪ್ರಿಲ್ 11ರಂದು ಮದುವೆ ಆಗಿದ್ದರು. ಆದರೆ, ಈ ಮದುವೆ ಯುವತಿ ಮನೆಯವರಿಗೆ ಇಷ್ಟವಿರಲಿಲ್ಲ. ಇಂಜಿನಿಯರಿಂಗ್ ಶಿಕ್ಷಣವನ್ನು ಮುಗಿಸದೇ ಪೂಜಿತಾ ಮದುವೆಯಾಗಿದ್ದಳು. ನವದಂಪತಿ ಅನಂತವರಂನಲ್ಲಿ ನೆಲೆಸಿದ್ದರು.
ಸೋಮವಾರ ಬೆಳಗ್ಗೆ ಅನಂತವರಂನಲ್ಲಿರುವ ಪೂಜಿತಾ ಅವರ ಅತ್ತೆ ಮನೆಗೆ ಬಂದ ಅವರ ಅಜ್ಜಿ, ಆಂಟಿ ಮತ್ತು ಅಂಕಲ್ ತಾಯಿಗೆ ಹುಷಾರಿಲ್ಲ ಎಂದು ಹೇಳಿದ್ದಾರೆ. ಆದರೆ, ಇದನ್ನು ನಂಬಲು ಒಪ್ಪದ ಪೂಜಿತಾ ಅವರೊಂದಿಗೆ ತೆರಳು ನಿರಾಕರಿಸಿದ್ದಾಳೆ. ಇದಾದ ಬಳಿಕ ಪೂಜಿತಾ ಅವರ ತಂದೆ ಶ್ರೀನಿವಾಸ ರೆಡ್ಡಿ, ಸಹೋದರ ನಿರಂಜನ್ ರೆಡ್ಡಿ ಮತ್ತು ಕೆಲ ಯುವಕರು ಪೂಜಿತಾಳನ್ನು ಬಲವಂತವಾಗಿ ಕಾರಿನಲ್ಲಿ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
Laxmi News 24×7