ವಿಜಯಪುರ: ಹಳೇ ಹುಬ್ಬಳ್ಳಿ ದಾಂಧಲೆ ಪ್ರಕರಣದ ಆರೋಪಿಗಳಿಗೆ ಶಾಸಕ ಝಮೀರ್ ಅಹ್ಮದ್ ಅವರು ಆಹಾರದ ಕಿಟ್ ವಿತರಣೆ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶಾಸಕ ಝಮೀರ್ ನನ್ನು ಒದ್ದು ಒಳಗೆ ಹಾಕಬೇಕು’ ಎಂದು ವಾಗ್ದಾಳಿ ನಡೆಸಿದ್ದಾರೆ.
’ಝಮೀರ್ ಹಿಂದೂ ವಿರೋಧಿ ಹಾಗೂ ನಮ್ಮ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಾರೆ. ಝಮೀರ್‌ಗೆ ನಮ್ಮ ಸರ್ಕಾರದ ಸಲುಗೆ ಇದೆ, ಎಲ್ಲಾ ಹೊಂದಾಣಿಕೆ ಇದೆ. ಝಮೀರ್ ಅಹ್ಮದ್ ವಿರುದ್ಧ ಕೇಸ್ ದಾಖಲು ಮಾಡಬೇಕು. ಬಿಜೆಪಿಯಲ್ಲಿ ಮಹಾನಾಯಕನ ಬೆಂಬಲ ಝಮೀರ್ ಗೆ ಇದೆ, ಅವರದ್ದೆಲ್ಲ ಒಂದೇ ಬ್ಯುಸಿನೆಸ್’ ಎಂದು ಹೇಳಿದ್ದಾರೆ.
Laxmi News 24×7