Breaking News

ಹುಬ್ಬಳ್ಳಿ: ಮೊದಲ ಓಟದಲ್ಲಿಯೇ ಹಳಿತಪ್ಪಿದ ಪುಟಾಣಿ ರೈಲು

Spread the love

ಹುಬ್ಬಳ್ಳಿ: ಇಲ್ಲಿನ ಮಹಾತ್ಮಾಗಾಂಧಿ ಉದ್ಯಾನದಲ್ಲಿ ಶನಿವಾರ ಚಾಲನೆ ನೀಡಲಾದ ಪುಟಾಣಿ ರೈಲು ಮೊದಲ ಓಟದಲ್ಲಿಯೇ ಹಳಿತಪ್ಪಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಜಗದೀಶ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೇರಿದಂತೆ ಅನೇಕ ಗಣ್ಯರು ರೈಲಿನಲ್ಲಿ ಇದ್ದರು.

 

ಇಂದಿರಾ ಗಾಜಿನ ಮನೆ ಆವರಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಮುಕ್ತಾಯಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಜೋಶಿ ಚಾಲನೆ ನೀಡಿ, ಪುಟಾಣಿ ರೈಲಿನಲ್ಲಿ ಪ್ರಯಾಣಿಸಿದ್ದರು. ಐದು ಬೋಗಿಯಿರುವ ರೈಲಿನ ಮೊದಲ ಬೋಗಿಯಲ್ಲಿ ಜೋಶಿ ಮತ್ತು ಗಣ್ಯರು ಪ್ರಯಾಣಿಸಿದ್ದರು. ನೂರು ಮೀಟರ್ ದೂರವಷ್ಟೇ ರೈಲು ಕ್ರಮಿಸಿದೆ, ಆಗ ಮೂರನೇ ಬೋಗಿಯ ಗಾಲಿ ಕಂಬಿ ಬಿಟ್ಟು ಕೆಳಗೆ ಜಾರಿದೆ.

ಕೆಲ ಕ್ಷಣ ಆತಂಕದ ವಾತರಣ ನಿರ್ಮಾಣವಾಗಿತ್ತು. ಆಗ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಸಚಿವ ಜೋಶಿ ಮತ್ತು ಇತರರನ್ನು ರೈಲಿನಿಂದ ಕೆಳಗಿಳಿಸಿದರು. ₹4.2 ಕೋಟಿ ವೆಚ್ಚದಲ್ಲಿ ಪುಟಾಣಿ ರೈಲು ಯೋಜನೆ ಅಭಿವೃದ್ಧಿ ಪಡಿಸಲಾಗಿದೆ.

ನಾಲ್ಕು ಹವಾನಿಯಂತ್ರಿತ ಬೋಗಿಗಳು, ಎರಡು ಎಂಜಿನ್ ಒಳಗೊಂಡಿರುವ ರೈಲಿನಲ್ಲಿ 48 ವಯಸ್ಕರು ಅಥವಾ 60 ಮಕ್ಕಳು ಪ್ರಯಾಣಿಸಬಹುದಾಗಿದೆ. ಯಾವ ಕಾರಣಕ್ಕೆ ಹಳಿ ತಪ್ಪಿದೆ ಎಂದು ಇನ್ನೂ ತಿಳಿದು ಬಂದಿಲ್ಲ.


Spread the love

About Laxminews 24x7

Check Also

ಧಾರವಾಡ ಸಂಚಾರಿ ನಿಯಮ ಉಲ್ಲಂಘನೆ ಫೈನ್ 50% ಡಿಸ್ಕೌಂಟ್… 35 ಕೇಸ್ 9000 ಸಾವಿರ ದಂಡ ತುಂಬಿದ ನರೇಂದ್ರ ಗ್ರಾಮ ವ್ಯಕ್ತಿ.

Spread the love ಧಾರವಾಡ ಸಂಚಾರಿ ನಿಯಮ ಉಲ್ಲಂಘನೆ ಫೈನ್ 50% ಡಿಸ್ಕೌಂಟ್… 35 ಕೇಸ್ 9000 ಸಾವಿರ ದಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ