Breaking News

ರಾಜಕೀಯ ಜಂಗೀಕುಸ್ತಿ,ಎಚ್​ಡಿಕೆಗೆ ಠಕ್ಕರ್​ ಕೊಟ್ಟ ಸಿಪಿವೈ: ಕೊನೆಗೂ ತಹಸೀಲ್ದಾರ್​ ಎತ್ತಂಗಡಿ,

Spread the love

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಹಸೀಲ್ದಾರ್​ ವರ್ಗಾವಣೆ ವಿಚಾರ ತಾಲೂಕಿನಲ್ಲಿ ಉಭಯ ನಾಯಕರ ಕದನ ಮತ್ತೆ ಮುನ್ನಲೆಗೆ ಬಂದಿದೆ. ಕಾರಣವಾಗಿದ್ದು, ಈ ವಿಚಾರದಲ್ಲಿ ತಹಸೀಲ್ದಾರ್​ಗಳು ನೆಪಮಾತ್ರವಾದರೂ ಎಚ್​ಡಿಕೆ ಮತ್ತು ಸಿಪಿವೈ ನಡುವಿನ ಜಂಗೀಕುಸ್ತಿಗೆ ವೇದಿಕೆಯಾಗಿ ಪರಿಣಮಿಸಿದೆ.

ಶುಕ್ರವಾರ ನಡೆದ ದಿಢೀರ್​ ಬೆಳವಣಿಗೆಯಲ್ಲಿ ಸಿಪಿವೈ ಕೈ ಮೇಲಾಗಿದ್ದು, ಈ ಹಿಂದಿನ ಬೆಳವಣಿಗೆಗಳನ್ನು ಗಮನಿಸಿದರೆ ನಾಳೆ ಏನು ಬೇಕಾದರೂ ಆಗಬಹುದು ಎಂಬ ಪರಿಸ್ಥಿತಿ ಇದೆ.

ಚನ್ನಪಟ್ಟಣ ತಹಸೀಲ್ದಾರ್​ ಎಲ್​.ನಾಗೇಶ್​ ಕೊನೆಗೂ ವರ್ಗಾವಣೆಗೊಂಡಿದ್ದಾರೆ. ಈ ಸ್ಥಾನಕ್ಕೆ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಕೆ.ಸುದರ್ಶನ್​ ನಿಯೋಜನೆಗೊಂಡಿದ್ದಾರೆ. ಕಂದಾಯ ಇಲಾಖೆ ಕಾರ್ಯದರ್ಶಿ ಜಿ.ಎನ್​.ಸುಶೀಲ ಶುಕ್ರವಾರ ಈ ಆದೇಶ ಹೊರಡಿಸಿದ್ದು, ತಕ್ಷಣ ಜಾರಿಗೆ ಬರುವಂತೆ ಸುದರ್ಶನ್​ ಅವರನ್ನು ತಹಸೀಲ್ದಾರ್​ ಆಗಿ ನಿಯೋಜನೆಗೊಳ್ಳುವಂತೆ ಹಾಗೂ ನಾಗೇಶ್​ ಅವರನ್ನು ತಕ್ಷಣ ಸರ್ಕಾರಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.

ರಾಜಕೀಯ ಜಂಗೀಕುಸ್ತಿ: ತಹಸೀಲ್ದಾರ್​ ವರ್ಗಾವಣೆ ವಿಚಾರ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್​ ನಡುವೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಎಲ್​.ನಾಗೇಶ್​ ಪರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸುದರ್ಶನ್​ ಪರವಾಗಿ ಸಿ.ಪಿ.ಯೋಗೇಶ್ವರ್​ ಲಾಬಿ ನಡೆಸುವ ಮೂಲಕ ಈ ಹುದ್ದೆಯನ್ನು ತಮ್ಮ ಕಡೆಯವರೇ ಅಲಂಕರಿಸಬೇಕು ಎಂಬ ಹಠಕ್ಕೆ ಬಿದ್ದಿದ್ದರು. ಕಳೆದ ಎರಡು ವರ್ಷಗಳಿಂದ ಈ ಕ್ಷೇತ್ರದಲ್ಲೇ ಇದ್ದ ತಹಸೀಲ್ದಾರ್​ ನಾಗೇಶ್​ ಕೊನೆಗೂ ವರ್ಗಾವಣೆಗೊಂಡಿದ್ದು, ತಹಸೀಲ್ದಾರ್​ ವರ್ಗಾವಣೆ ವಿಚಾರದಲ್ಲಿ ಯೋಗೇಶ್ವರ್​ ಕೈ ಮೇಲಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ