ಹುಬ್ಬಳ್ಳಿಯಲ್ಲಿ ಡಿಜೆ ಹಳ್ಳಿ ಕೆಜೆ ಹಳ್ಳಿ ಮಾದರಿಯಲ್ಲಿಯೇ ಗಲಭೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತಿತ್ತು. ನನಗೆ ಈ ಕುರಿತಂತೆ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿಯೂ ಕೆಜೆ ಹಳ್ಳಿ ಡಿಜೆ ಹಳ್ಳಿ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ ಗಲಾಟೆಗೆ ಪ್ಲ್ಯಾನ್
ನನಗೆ ಪೊಲೀಸರು ಈ ಕುರಿತಂತೆ ಮಾಹಿತಿಯನ್ನು ನೀಡಿದ್ದಾರೆ ಎಂದ ಪ್ರಹ್ಲಾದ್ ಜೋಶಿ
ಕಾಂಗ್ರೆಸ್ ತನ್ನ ತುಷ್ಠೀಕರಣ ಪಾಲಿಸಿಯನ್ನು ಮೊದಲು ಬಿಡಲಿ
ಗಲಭೆಯಿಂದ ಲಾಭ ಎನ್ನುವ ಕುರಿತಂತೆ ಯಾರೂ ಕೂಡ ಮಾತನಾಡಬಾರದು
ಹುಬ್ಬಳ್ಳಿ ನಗರದಲ್ಲಿಯೂ ಕೂಡ ಬೆಂಗಳೂರಿನ ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ಮಾಡಿದ ಗಲಭೆಯ ರೀತಿಯಲ್ಲಿಯೇ ಹುಬ್ಬಳ್ಳಿಯಲ್ಲಿಯೂ ಕೂಡ ಗಲಭೆಯನ್ನು ಮಾಡುವ ಪ್ರಯತ್ನವನ್ನು ಮಾಡಲಾಗುತ್ತಿತ್ತು. ನನಗೆ ಈ ಕುರಿತಂತೆ ಪೊಲೀಸ್‍ರು ಮಾಹಿತಿಯನ್ನೂ ಕೂಡ ನೀಡಿದ್ದಾರೆ ಎಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಘಟನೆ ನಡೆದ ವೇಳೆ ನಾನು ಹೊಸಪೇಟೆಯಿಂದ ಧಾವಿಸಿ ಬಂದು ಈ ಕುರಿತಂತೆ ಮಾಹಿತಿಯನ್ನು ಪಡೆದುಕೊಂಡಿದ್ದೇನೆ.
ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿ ಮಾದರಿಯಲ್ಲಿಯೇ ಹುಬ್ಬಳ್ಳಿಯಲ್ಲಿಯೂ ಕೂಡ ಗಲಭೆಯನ್ನು ನಡೆಸಲು ಯೋಜಿಸಲಾಗಿತ್ತು. ನನಗೆ ಈ ಕುರಿತಂತೆ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಹುಬ್ಬಳ್ಳಿ ಘಟನೆಯನ್ನು ಐಎನ್‍ಎ ವಹಿಸುವುವ ಕುರಿತು ಪೊಲೀಸರು ವಿಚಾರ ಮಾಡುತ್ತಾರೆ
ಹುಬ್ಬಳ್ಳಿ ಗಲಭೆಯನ್ನು ಸೃಷ್ಟಿಮಾಡಿದವರು ಕೆಲ ಮತಾಂಧ ಮುಸಲ್ಮಾನರು
ಅಶಾಂತಿ ಸೃಷ್ಟಿಮಾಡಿದವರನ್ನು ಬಂಧಿಸಿದರೆ ಕಾಂಗ್ರೆಸ್ ಯಾಕೆ ಅವರ ಬೆಂಬಲಕ್ಕೆ ನಿಲ್ಲುತ್ತೆ
ಇನ್ನಾದರೂ ಕಾಂಗ್ರೆಸ್ ತನ್ನ ತುಷ್ಠೀಕರಣ ನೀತಿಯನ್ನು ಬಿಡಲಿ ಎಂದ ಕೇಂದ್ರ ಸಚಿವರು