ಉಡುಪಿ: ಇಂದಿನಿಂದ ಆರಂಭಗೊಂಡಿರುವಂತ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ, ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯೋದಕ್ಕೆ ಅವಕಾಶ ನೀಡುವಂತೆ ಹಿಜಾಬ್ ಹೋರಾಟಗಾರ್ತಿಯರಾದಂತ ಆಲಿಯಾ ಅಸಾದಿ ಹಾಗೂ ರೇಷ್ಮಾ ಪಟ್ಟು ಹಿಡಿದಿದ್ದರು. ಅವರನ್ನು ತಹಶೀಲ್ದಾರ್ ಕೋರ್ಟ್ ಆದೇಶದಂತೆ ಹಿಜಾಬ್ ತೆಗೆದು ಪರೀಕ್ಷೆ ಬರೆಯುವಂತೆ ಮನವೊಲಿಕೆ ಮಾಡಿದ್ರು.
ಆದ್ರೇ ಅದಕ್ಕೂ ಬಗ್ಗದಂತ ಹಿಜಾಬ್ ಹೋರಾಟಗಾರ್ತಿಯರು, ಪರೀಕ್ಷೆಯನ್ನೇ ಬರೆಯದೇ ಮನೆಗೆ ವಾಪಾಸ್ ಆಗಿದ್ದಾರೆ.