ಮಂಗಳೂರು: ಮಹಿಳಾ ಉಪನ್ಯಾಸಕಿಯೊಬ್ಬರ ಫೋನ್ ನಂಬರ್ ಮತ್ತು ಇ- ಮೇಲ್ ಐಡಿಯಿರುವ ಫೋಸ್ಟರ್ ನ್ನು ಸಾರ್ವಜನಿಕ ಶೌಚಾಲಯದ ಗೋಡೆ ಮೇಲೆ ಹಾಕಿದ ಆರೋಪದ ಮೇರೆಗೆ ಬಂಟ್ವಾಳದ ಖಾಸಗಿ ಕಾಲೇಜ್ ವೊಂದರ ಮೂವರು ಸಿಬ್ಬಂದಿ ಬಂಧನವಾಗುವ ಸಾಧ್ಯತೆಯಿದೆ.
ಖಾಸಗಿಯ ಕಾಲೇಜಿನ ಪ್ರಕಾಶ್ ಶೆಣೈ, ಅರ್ಥಶಾಸ್ತ್ರ ಉಪನ್ಯಾಸಕ ಪ್ರದೀಪ್ ಪೂಜಾರಿ ಮತ್ತು ಹೆಬ್ರಿಯ ತಾರನಾಥ ಬಿಎಸ್ ಶೆಟ್ಟಿ ಆರೋಪಿಗಳು ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಜನರಿದ್ದು, ಶೀಘ್ರದಲ್ಲಿಯೇ ಬಂಧನವಾಗುವ ಸಾಧ್ಯತೆಯಿದೆ.
ಈ ಮೂವರು ಆರೋಪಿಗಳು ಹಾಗೂ 58 ವರ್ಷದ ಕನ್ನಡ ಲೇಖಕಿ ಬಂಟ್ವಾಳದಲ್ಲಿ ಕಾಲೇಜ್ ವೊಂದರಲ್ಲಿ ಸಹೋದೋಗ್ಯಿಗಳಾಗಿದ್ದರು. ನಾಲ್ಕು ವರ್ಷಗಳ ಹಿಂದೆ ಕಾಲೇಜ್ ಆಡಳಿತ ಮಂಡಳಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಡೆಪ್ಯೂಟೇಷನ್ ನಲ್ಲಿ ಮಂಗಳೂರಿನ ಸರ್ಕಾರಿ ಕಾಲೇಜ್ ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್ ಕಮೀಷನರ್ ಎನ್. ಶಶಿ ಕುಮಾರ್ ತಿಳಿಸಿದ್ದಾರೆ.