ಬಂಧಿತರ ಸಂಖ್ಯೆ ನೂರರ ಗಡಿ ದಾಟಿದ್ದು, ಬಂಧಿತರಲ್ಲಿ ಮೂವರು ಬಾಲಾಪರಾಧಿಗಳಿದ್ದಾರೆ. ಈ ಸಂಬಂಧ ಇದುವರೆಗೆ ಒಟ್ಟು 8 ಪ್ರತ್ಯೇಕ FIR ದಾಖಲಾಗಿದೆ. ಬಂಧಿತರನ್ನು ಕಲಬುರಗಿ ಅಥವಾ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಪೊಲೀಸರ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸ್ಥಳೀಯ ಜೈಲಿಗೆ (Jail) ಕಳಿಸಿದ್ರೆ, ಸಂಬಂಧಿಕರ ಭೇಟಿ, ಊಟ ಅಂತ ಸಲುಗೆ ಸಿಗಲಿದೆ. ಹೀಗಾಗಿ ಬಂಧಿತರನ್ನ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಸಿದ್ದತೆ ಮಾಡಿಕೊಳ್ಳಲಾಗ್ತಿದೆ.
ನಮ್ಮ ಮಕ್ಕಳು ಅಮಾಯಕರು
ಬಂಧಿತರ ಪೋಷಕರು ನಮ್ಮ ಮಕ್ಕಳು ಅಮಾಯಕರು ಯಾವ ತಪ್ಪು ಮಾಡಿಲ್ಲ ಅವರನ್ನು ಬಿಟ್ಟುಬಿಡಿ ಎಂದು ಗೋಳಾಡ್ತಿದ್ದಾರೆ. ಕಳೆದ ರಾತ್ರಿ ನಡೆದ ಗಲಭೆಯಲ್ಲಿ ಅಮಾಯಕರನ್ನು ಬಂಧಿಸಲಾಗಿದೆ ಎಂಬ ಆರೋಪ ಕೂಗು ಕೇಳಿ ಬರ್ತಿದೆ. ಪೊಲೀಸ್ ಠಾಣೆ ಬಳಿ ಬೆಳಿಗ್ಗೆಯಿಂದಲೂ ತಮ್ಮ ಮಕ್ಕಳಿಗಾಗಿ ಪೋಷಕರು ಕಾದು ಕೂತ್ತಿದ್ದಾರೆ. ಬೇರೆ ಕೆಲಸಕ್ಕೆಂದು ಬಂದವರನ್ನು ಹಿಡಿದು ತರಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ
ನಮ್ಮ ಮಕ್ಕಳು ಚಿಕ್ಕವರು ಅವ್ರನ್ನು ಬಿಡಿ
ಮೂವರು ಬಾಲಾಪರಾಧಿಗಳ ಪೋಷಕರು ಠಾಣೆ ಮುಂದೆ ಮಕ್ಕಳನ್ನು ಬಿಟ್ಟುಬಿಡುವಂತೆ ಕಣ್ಣೀರಿಟ್ಟಿದ್ದಾರೆ. ನಮ್ಮ ಮಕ್ಕಳು ಯಾವ ತಪ್ಪು ಮಾಡಿಲ್ಲ ಗಲಾಟೆಯಲ್ಲಿ ಭಾಗವಹಿಸುವ ವಯಸ್ಸಲ್ಲ ಅವರದ್ದು, ಆದರೂ ಅಮಾಯಕರನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ . ಅಮಾಯಕ ಮಕ್ಕಳನ್ನು ಬಿಟ್ಟು ಬಿಡಿ, ನಿಜವಾದ ತಪ್ಪಿತಸ್ಥರನ್ನು ಮಾತ್ರ ವಶಕ್ಕೆ ಪಡೆಯಬೇಕು. ತಮ್ಮ ಮಕ್ಕಳ ಬಿಡುಗಡೆ ಮಾಡುವಂತೆ ಪೋಷಕರು ಒತ್ತಾಯಿಸುತ್ತಿದ್ದಾರೆ.