ವಿಜಯನಗರ : ವಾಟ್ಸ್ಯಾಪ್ ಸ್ಟೇಟಸ್ ಹಾಕಿದ್ದ ಎಂಬ ಸಣ್ಣ ವಿಚಾರಗಳಿಗೆ ಯಾಕೆ ಕೆರಳುತ್ತಾರೆ ಎನ್ನುವುದು ಗೊತ್ತಾಗುತ್ತಿಲ್ಲ. ನಾವು ಶಾಂತಿ, ಸೌಹಾರ್ದತೆ, ವಿಶ್ವಾಸದಿಂದ ಇದ್ದೇವೆ ಆದ್ರೆ ಅವರು ಸಣ್ಣ ಘಟನೆ ಇಟ್ಟುಕೊಂಡು ಗಲಾಟೆ ಮಾಡೋಕೆ ಕಾಯ್ತಾ ಇರ್ತಾರಾ ಅಂತ ಅನಿಸುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದ ಘಟನೆ ದುರದೃಷ್ಟಕರ. ನಮ್ಮ ಐತಿಹಾಸಿಕ ದೇವಾಲಯಗಳನ್ನೇ ನಾಶ ಮಾಡಿದ್ರು ಸಹ ನಾವು ಶಾಂತಿ ಇಂದ ಇದ್ದೇವೆ. ಆದ್ರೆ ಸಣ್ಣ ಸಣ್ಣ ಕಾರಣಕ್ಕೆ ಇವರು ಗಲಭೆ ಸೃಷ್ಟಿಸುತ್ತಿದ್ದಾರೆ. ಅವರು ಮಾತ್ರ ಉಪ್ಪು, ಹುಳಿ ಖಾರ ತಿಂತಾರಾ..? ಇಂತಹ ಸಂದರ್ಭದಲ್ಲಿ ಯಾಕೆ ಸೆಕ್ಯುಲರ್‌ಗಳು ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.
ಸ್ಟೇಟಸ್ ಹಾಕಿದವನ ವಿರುದ್ಧ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬಹುದಿತ್ತು. ಕಾನೂನು ಕ್ರಮಕ್ಕೆ ಒತ್ತಾಯಿಸಬಹುದಿತ್ತು ಆದ್ರೆ ಕಾನೂನನ್ನ ಕೈಗೆ ತೆಗೆದುಕೊಳ್ಳಲು ಯಾರು ಹೇಳಿದ್ರು ಎಂದು ಕಿಡಿಕಾರಿದರು.