Breaking News

ಹುಬ್ಬಳ್ಳಿ ಗಲಭೆ : ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಬಂಧಿತರ ಸಂಬಂಧಿಕರು!

Spread the love

ಹುಬ್ಬಳ್ಳಿ (ಧಾರವಾಡ): ಹುಬ್ಬಳ್ಳಿಯಲ್ಲಿ ಧರ್ಮದ ವಿಚಾರವಾಗಿ ರಾತ್ರೋರಾತ್ರಿ ಅಶಾಂತಿ ಸೃಷ್ಟಿಯಾಗಿದೆ.

ಗಲಾಟೆಗೆ ಕಾರಣರಾಗಿದ್ದವರನ್ನು ಪೊಲೀಸರು ವಶಕ್ಕೆ ಪಡೆದ ಬೆನ್ನಲ್ಲೇ ಅವರ ಸಂಬಂಧಿಕರು ಠಾಣೆಯ ಎದುರು ಹೈಡ್ರಾಮಾ ನಡೆಸಿದ್ದಾರೆ. ಧಾರ್ಮಿಕ ವಿಷಯಕ್ಕೆ ಧಕ್ಕೆ ಉಂಟಾಗುವ ಪೋಸ್ಟ್ ಮಾಡಿದ್ದ ಯುವಕನನ್ನು, ಪೊಲೀಸ್​ ಠಾಣೆ ಆವರಣದಲ್ಲಿ ಕಲ್ಲು ತೂರಾಟ ನಡೆಸಿ ಗಲಾಟೆ ಮಾಡಿದವರನ್ನು ಪೊಲೀಸರು ಬಂಧಿಸಿದ್ದಾರೆ.

ಆದರೆ, ಬಂಧಿತರ ಸಂಬಂಧಿಕರು ಪೊಲೀಸ್ ಠಾಣೆಗೆ ಆಗಮಿಸಿ ತಮ್ಮ ಸಂಬಂಧಿಕರನ್ನು ಕೈ ಬಿಡುವಂತೆ ಒತ್ತಾಯಿಸುತ್ತಿದ್ದಾರೆ. ಪೊಲೀಸರು ಹಾಗೂ ಬಂಧಿತರ ಸಂಬಂಧಿಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಬಂಧಿತರ ಸಂಬಂಧಿಕರುಇನ್ನೂ ಬಂಧಿತರನ್ನು ಬೇರೆ ಕಡೆಗೆ ಶಿಫ್ಟ್​ ಮಾಡುವ ಸಂದರ್ಭದಲ್ಲಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರನ್ನು ಕರೆದೊಯ್ಯುವಾಗ, ನಮ್ಮ ಮಕ್ಕಳು, ಮನೆಯವರು ತಪ್ಪು ಮಾಡಿಲ್ಲ. ಸುಖಾಸುಮ್ಮನೆ ಬಂಧಿಸಲಾಗಿದೆ ಎಂದು ಪೊಲೀಸ್ ಠಾಣೆ ಎದುರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಅಂಗನವಾಡಿಯಿಂದಲೇ ಆರಂಭವಾಗಲಿ ಡಿಜಿಟಲ್ ಕಲಿಕೆ”

Spread the love ಅಂಗನವಾಡಿಯಿಂದಲೇ ಆರಂಭವಾಗಲಿ ಡಿಜಿಟಲ್ ಕಲಿಕೆ” ನಿಪ್ಪಾಣಿ ಮತಕ್ಷೇತ್ರದ ಭೋಜ ಗ್ರಾಮದಲ್ಲಿ “ಕೇಂದ್ರ ಪುರಸ್ಕೃತ ಸಕ್ಷಮ ಯೋಜನೆಯಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ