ಉಡುಪಿ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಇಂದು ಸಂಜೆ ಸಚಿವ ಸ್ಥಾನಕ್ಕೆ ಕೆ.ಎಸ್ ಈಶ್ವರಪ್ಪ ರಾಜೀನಾಮೆ ನೀಡಲಿದ್ದಾರೆ. ಆದ್ರೇ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆಯನ್ನು ರಾಜ್ಯಾಧ್ಯಂತ ನಡೆಸಲಾಗುತ್ತಿದೆ.
ಈ ನಡುವೆ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, ಅವರ ಸಾವಿಗೂ ಮುನ್ನವೇ ಲಾಡ್ಜ್ ನಲ್ಲಿ ಆಗಿದ್ದೇನು ಎನ್ನುವ ಮಾಹಿತಿಯನ್ನು ಸಂತೋಷ್ ಸ್ನೇಹಿತರು ಬಿಚ್ಚಿಟ್ಟಿದ್ದಾರೆ.
ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ರೂಂ ಮಾಡಿಕೊಂಡು ಗುತ್ತಿಗೆದಾರ ಸಂತೋಷ್ ಹಾಗೂ ಆತನ ಸ್ನೇಹಿತರಾದಂತ ಸಂತೋಷ್ ಮೇದಪ್ಪ ಹಾಗೂ ಪ್ರಶಾಂತ್ ಶೆಟ್ಟಿ ಜೊತೆಗೆ ಇದ್ದರು. ಹೀಗೆ ಲಾಡ್ಜ್ ನಲ್ಲಿದ್ದಂತ ಅವರು, ಏಪ್ರಿಲ್ 12ರಂದು ಆತ್ಮಹತ್ಯೆಗೂ ಮುನ್ನಾ, ತನ್ನ ಸ್ನೇಹಿತರಿಗೆ ನಾನು ಮತ್ತೊಂದು ರೂಂ ಮಾಡಿರುವೆ. ನನ್ನ ಸ್ನೇಹಿತನೊಬ್ಬನು ಬರ್ತಾನೆ ಅವನೊಂದಿಗೆ ಇರೋದಾಗಿ ಹೇಳಿ, ಪ್ರತ್ಯೇಕವಾಗಿ ರೂಂ ಮಾಡಿದ್ದರಂತೆ.
ಗುತ್ತಿಗೆದಾರ ಸಂತೋಷ್ ಅವರನ್ನು ರಾಜೇಶ್ ಎಂಬಾತ ಭೇಟಿಯಾಗಲು ಬರ್ತಾ ಇರೋದಾಗಿ ಸಂತೋಷ್ ಹೇಳಿದ್ದರು. ಅದಕ್ಕಾಗಿಯೇ ಅವರು ಏಪ್ರಿಲ್ 12ರಂದು ಪ್ರತ್ಯೇಕವಾಗಿ ಮತ್ತೊಂದು ರೂಂ ಮಾಡಿಕೊಂಡಿದ್ದರು. ನಾವು ಮತ್ತೊಂದು ಕೋಣೆಯಲ್ಲಿದ್ದೆವು ಎಂಬುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.