40% ಕಮಿಷನ್ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಮಾಡಿದ್ದ ಕಾಮಗಾರಿಗಳ ಬಗ್ಗೆ ಸಾಕಷ್ಟು ಊಹಾಪೋಹಗಳು ಹುಟ್ಟುಕೊಂಡಿವೆ.
ಬೆಳಗಾವಿಯಲ್ಲಿ ಆತ ವರ್ಕ್ ಆರ್ಡರ್ ಇಲ್ಲದೆ ಕೆಲಸ ಮಾಡಿದ್ದ ಎಂಬ ಆರೋಪದ ಜೊತೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಆ ಕಾಮಗಾರಿ ನಡೆದಿದ್ದು ಇದು ಶಾಸಕಿ ಗಮನಕ್ಕೆ ಬರಲಿಲ್ಲವೇ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಆರೋಪಿಸಿದ್ದಾರೆ.
ಕಾಮಗಾರಿ ಕೈಗೆತ್ತಿಕೊಳ್ಳುವುದಕ್ಕೆ ಅನುಮತಿ ನೀಡಿದ್ದು ಯಾರು? 4 ಕೋಟಿ ರೂ. ಕೆಲಸ ಮಾಡಲು ವರ್ಕ್ ಆರ್ಡರ್ ಇತ್ತಾ? ಇದನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಏಕೆ ಪ್ರಶ್ನಿಸಲಿಲ್ಲ ಎಂದು ಹೇಳಿದ್ದಾರೆ.
ಇದೆಲ್ಲದಕ್ಕಿಂತ ಮುಖ್ಯವಾಗಿ ಆತ 2018ರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪರ ಕೆಲಸ ಮಾಡಿದ್ದ. ರಾಹುಲ್ ಗಾಂಧಿ ಅವರ ಲೆಡರ್ ಹೆಡ್ ಕೂಡ ವಂಚನೆ ಮಾಡಿದ್ದ ಎಂದರು.