Breaking News

ಕಾಂಗ್ರೆಸ್ ಬಣ ರಾಜಕೀಯಕ್ಕೆ ಹೈಕಮಾಂಡ್​ನಿಂದಲೇ ಮದ್ದು

Spread the love

ಬೆಂಗಳೂರು :ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಆಂತರಿಕ ಕಲಹದಿಂದ ಸರ್ಕಾರವನ್ನೂ ಕಳೆದುಕೊಂಡಿ ದ್ದಲ್ಲದೆ, ಪಕ್ಷಕ್ಕೂ ಅಪಾರ ಹಾನಿಯಾದುದ್ದನ್ನು ಅರಿತ ಹೈಕಮಾಂಡ್ ಕರ್ನಾಟಕವನ್ನು ಗಂಭೀರವಾಗಿ ಪರಿಗಣಿಸಿದೆ.

ಚುನಾವಣೆ ಎದುರಿಗಿರುವಾಗ ರಾಜ್ಯ ಕಾಂಗ್ರೆಸ್​ನಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಗ್ರಹಿಸಿರುವ ಹೈಕಮಾಂಡ್, ಇಡೀ ಸಂಘಟನೆಯ ಮೇಲೆ, ಅಷ್ಟೂ ಕ್ಷೇತ್ರದ ಪೂರ್ಣ ಹಿಡಿತ ತೆಗೆದುಕೊಳ್ಳಲು ಬಯಸಿದೆ.

ಇದೇ ಕಾರಣಕ್ಕೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಚುನಾವಣೆವರೆಗೂ ಪ್ರತಿ ತಿಂಗಳಲ್ಲಿ 15 ದಿನವನ್ನು ಕರ್ನಾಟಕಕ್ಕೆ ಮೀಸಲಿಡಲಿದ್ದಾರೆ. ಹಾಗೆಯೇ ಪಕ್ಷದ ಬೆಳವಣಿಗೆಯನ್ನು ಪಡೆದುಕೊಳ್ಳಲು ಪ್ರತ್ಯೇಕ ನೆಟ್​ವರ್ಕ್ ರೂಪಿಸಿಕೊಂಡಿದ್ದಾರೆ. ಇನ್ನೊಂದು ಭಾಗವಾಗಿ 224 ವಿಧಾನಸಭಾ ಕ್ಷೇತ್ರದ ಸ್ಥಿತಿಗತಿ ಅರಿತು, ಅಲ್ಲಿ ಆಗಬೇಕಾದ ಸುಧಾರಣೆ ಕ್ರಮಗಳನ್ನು ಪರಿಶೀಲಿಸುವುದು ಮತ್ತು ನಿರಂತರವಾಗಿ ಗಮನಿಸಲು ಬಯಸಿರುವ ಹೈಕಮಾಂಡ್, ಈ ಜವಾಬ್ದಾರಿಯನ್ನೂ ಸಹ ಸುರ್ಜೆವಾಲ ಹೆಗಲಿಗೆ ಹಾಕಿದೆ.

ರಾಜ್ಯ ಘಟಕದಲ್ಲಿ ಸಿದ್ದರಾಮಯ್ಯ ಬಣ, ಡಿ.ಕೆ.ಶಿವಕುಮಾರ್ ಬಣ ಸೇರಿ ಕ್ಷೇತ್ರವಾರು ಸ್ಥಳೀಯ ನಾಯಕರ ಬಣಗಳೂ ಇವೆ. ಪರಿಸ್ಥಿತಿ ಈ ರೀತಿ ಇದ್ದಾಗ ಚುನಾವಣೆಯಲ್ಲಿ ಒಳ ಹೊಡೆತ ಬೀಳಬಹುದು. ಜಾತಿ ಸಮೀಕರಣ ತಲೆ ಕೆಳಗಾಗಬಹುದು. ಹೀಗಾಗಿ ಪ್ರತಿ ಕ್ಷೇತ್ರದಲ್ಲೂ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಲೆಕ್ಕಾಚಾರದಲ್ಲೇ ಸುರ್ಜೆವಾಲ ಅಖಾಡಕ್ಕಿಳಿದಿದ್ದಾರೆ. ಕ್ಷೇತ್ರದ ಪರಿಚಯ, ಜಾತಿವಾರು ಮತದಾರರು, ಯಾವ ಸಮುದಾಯ ಯಾವ ಪಕ್ಷದ ಜತೆ ಇದೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಮತಗಳಿವೆ, ಬಿಜೆಪಿ ಅಥವಾ ಜೆಡಿಎಸ್ ಸೋಲಿಸಲು ಇರುವ ಅವಕಾಶಗಳ ಪ್ರಮಾಣ, ಸಂಭಾವ್ಯ ಅಭ್ಯರ್ಥಿಗಳು, ಅವರ ವೈಯಕ್ತಿಕ ಸಾಮರ್ಥ್ಯ, ಈ ಹಿಂದಿನ ಚುನಾವಣೆಗಳಲ್ಲಿ ಮತ ವಿಭಜನೆ ಹೀಗೆ ಎಲ್ಲ ಆಯಾಮಗಳಲ್ಲೂ ಅವಲೋಕನ ನಡೆಸಲಾಗುತ್ತದೆ. ಈ ಕಾರ್ಯ ಈ ತಿಂಗಳೊಳಗೆ 3-4 ಹಂತದಲ್ಲಿ ನಡೆಯುವುದು. ಕೆಲ ಕ್ಷೇತ್ರಗಳಲ್ಲಿ ಪೈಪೋಟಿ ಏರ್ಪಡಬಹುದು, ಜತೆಗೆ ಜೆಡಿಎಸ್ ಮತ್ತು ಬಿಜೆಪಿಯಿಂದ ಗೆಲ್ಲುವ ಕುದುರೆಗಳನ್ನು ಕರೆ ತರುವುದರಿಂದ ಒಂದಷ್ಟು ಸಮಸ್ಯೆ ಉಂಟಾಗಬಹುದು, ಇಂತಹ ಬಿಕ್ಕಟ್ಟನ್ನು ದೆಹಲಿಯಿಂದಲೇ ನಿರ್ವಹಿಸಲು ಬಯಸಲಾಗಿದೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ