Breaking News

ಅಪ್ಪು ಮಗಳ ಶಾಲೆಯಲ್ಲಿ ಅಶ್ವಿನಿ ಪುನೀತ್ ಅವ್ರಿಗೆ ಸನ್ಮಾನ; ವಿಡಿಯೋ ವೈರಲ್

Spread the love

ಬೆಂಗಳೂರು : ಕನ್ನಡದ ಪವರ್‌ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಅವರು ತೀವ್ರ ಹೃದಯ ಸ್ತಂಭನದಿಂದ ಬಳಲಿದ ನಂತರ ನಿಧನರಾಗಿದ್ದರು . ಅವರ ನಿಧನವು ಅವರ ಅನೇಕ ಅಭಿಮಾನಿಗಳಿಗೆ ಇಂದಿಗೂ ನಂಬಲಾಗದ ಸತ್ಯವಾಗಿದೆ . ಇನ್ನು , ನಟ ಪುನೀತ್ ರಾಜ್​ಕುಮಾರ್ ಅವರು ನಿಧನರಾದ ಬಳಿಕ ಅವರಿಗೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ . ನಟ ಪುನೀತ್ ರಾಜ್​ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ನಟನಿಗೆ ಸಿಕ್ಕ ಹಲವು ಪ್ರಶಸ್ತಿಗಳನ್ನು ಸ್ವೀಕರಿಸಿದರು .

ಇದೀಗ , ಪುನೀತ್ ಅವರ ಪುತ್ರಿ ವಂದಿತಾ ಅವರು ಒದುತ್ತಿರುವ ಸೋಫಿಯಾ ಶಾಲೆಯಲ್ಲಿ ಅಶ್ವಿನಿ ಪುನೀತ್ ಅವ್ರಿಗೆ ಸನ್ಮಾನ ಮಾಡಲಾಗಿದೆ . ಅಂದಹಾಗೆ , ಪುನೀತ್ ಪುತ್ರಿ ವಂದಿತಾ ಅವರು ಸೋಫಿಯಾ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಒದುತ್ತಿದ್ದಾರೆ . ಇನ್ನು , ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರಿಗೆ ಸನ್ಮಾನ ಮಾಡಿದ ಕಾರ್ಯಕ್ರಮದಲ್ಲಿ ನಟ ಯುವ ರಾಜ್​ಕುಮಾರ್ ಮತ್ತು ಮಂಗಳಮ್ಮ ಅವರು ಭಾಗಿಯಾಗಿದ್ದಾರೆ . ಇದಕ್ಕೆ ಸಂಬಂಧ ಪಟ್ಟ ಕೆಲ ಫೋಟೋಗಳು ಮತ್ತು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ .


Spread the love

About Laxminews 24x7

Check Also

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸಿಎಂ ಭೇಟಿ

Spread the love ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸಿಎಂ ಭೇಟಿ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ