ಮುಂಬೈ, ಏ.8- ವಿಶ್ವ ಕ್ರಿಕೆಟ್‍ನಲ್ಲಿ ಬಲಿಷ್ಠ ತಂಡವೆಂದೇ ಬಿಂಬಿಸಿಕೊಂಡಿರುವ ಭಾರತ ಈಗ ಮತ್ತೊಮ್ಮೆ ಐಸಿಸಿಯಲ್ಲಿ ತನ್ನ ಸಾರ್ವಭೌಮತ್ವವನ್ನು ಸಾಧಿಸಲು ಹೊರಟಿದೆ.
ಐಸಿಸಿ ಅಧ್ಯಕ್ಷರಾಗಿರುವ ನ್ಯೂಜಿಲ್ಯಾಂಡ್‍ನ ಖ್ಯಾತ ವಕೀಲ ಗ್ರೆಗ್ ಬಾಕ್ರ್ಲೇ ಅವರ ಕಾಲಾವಧಿ ಜುಲೈಗೆ ಮುಕ್ತಾಯವಾಗುವುದರಿಂದ ಮುಂದಿನ ಅವಧಿಯ ಅಧ್ಯಕ್ಷ ಗಾದಿಯ ಮೇಲೆ ಭಾರತದ ಖ್ಯಾತ ನಾಮರು ಕಣ್ಣಿಟ್ಟಿದ್ದಾರೆ.
ಜೈಶಾಗೆ ದಾದಾ, ಠಾಕೂರ್ ಪೈಪೋಟಿ:
ಈ ಹಿಂದೆ ಬಿಸಿಸಿಐ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದ ಕೇಂದ್ರ ಸಚಿವ ಅಮಿತ್‍ಶಾರ ಪುತ್ರ ಜೈ ಶಾ ಅವರು ಈ ಬಾರಿ ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ, ಆದರೆ ಇವರಿಗೆ ಕೇಂದ್ರ ಯುವಜನ ವ್ಯವಹಾರ ಮತ್ತು ಸಂವಹನ ಸಚಿವ ಅನುರಾಗ್ ಠಾಕೂರ್ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಪೈಪೋಟಿ ನೀಡಲು ಸಜ್ಜಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಭಾರತದ ಪರವಾಗಿ ಮಾಜಿ ಕ್ರಿಕೆಟಿಗ ಸೌರವ್‍ಗಂಗೂಲಿ ಹಾಗೂ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಮಾತ್ರ ಪೈಪೋಟಿ ನಡೆಸುವ ಲಕ್ಷಣಗಳು ಗೋಚರಿಸಿತ್ತಾದರೂ ಆದರೆ ಕಳೆದ ರಾತ್ರಿ ನಡೆದ ಬೆಳವಣಿಗೆಯಲ್ಲಿ ಬಿಸಿಸಿಐ ಮಂಡಳಿಯು ಮಾಜಿ ಅಧ್ಯಕ್ಷ ಹಾಗೂ ಹಾಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನೇ ಮುಂದಿನ ಐಸಿಸಿ ಅಧ್ಯಕ್ಷರಾಗಿ ಮಾಡುವತ್ತ ಒಲವು ತೋರಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.