Breaking News

ಕೋಟಿಗಟ್ಟಲೇ ಖರ್ಚು ಮಾಡಿ ಹಾಳು ಬಿದ್ದಿರುವ ಪಾಲಿಕೆಯ ಪಾರ್ಕಿಂಗ್ ಝೋನ್ ಈಗ ಗಾಂಜಾ ಮಾರಾಟಗಾರರ ಜಂಕ್ಷನ್

Spread the love

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಗಾಂಜಾ ಮಾರಾಟವನ್ನು ತಡೆಯಲು ಬೆಳಗಾವಿ ಪೋಲೀಸ್ರು ಸೈಲೆಂಟಾಗಿ ಕಾರ್ಯಾಚರಣೆ ನಡೆಸುತ್ತಲೇ ಇದ್ದು ಈ ಕುರಿತು ಖಂಜರ್ ಗಲ್ಲಿಯಲ್ಲಿ ಪೋಲೀಸರು ಖಾಕಿ ಖದರ್ ತೋರಿಸಿದ್ದಾರೆ.

ಖಂಜರ್ ಗಲ್ಲಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಾರ್ಕೆಟ್ ಪೋಲೀಸ್ ಠಾಣೆಯ ಪೋಲೀಸರು ಬಂಧಿಸಿ,ಅರ್ದ ಕೆಜಿ (500gm) ಗಾಂಜಾ ವಶಪಡಿಸಿಕೊಂಡಿದ್ದಾರೆ.

ಖಂಜರ್ ಗಲ್ಲಿಯ ಪಾರ್ಕಿಂಗ್ ಸ್ಥಳವನ್ನು ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಸದುಪಯೋಗ ಮಾಡಿಕೊಳ್ಳುತ್ತಿಲ್ಲ ಆದ್ರೆ ಕೋಟಿಗಟ್ಟಲೇ ಖರ್ಚು ಮಾಡಿ ಹಾಳು ಬಿದ್ದಿರುವ ಪಾಲಿಕೆಯ ಪಾರ್ಕಿಂಗ್ ಝೋನ್ ಈಗ ಗಾಂಜಾ ಮಾರಾಟಗಾರರ ಜಂಕ್ಷನ್ ಆಗಿದ್ದು ಇದೇ ಸ್ಥಳದಲ್ಲಿ ಇವತ್ತು ಇಬ್ಬರು ಗಾಂಜಾ ಮಾರಾಟಗಾರರು ಪೋಲೀಸರ ಬಲೆಗೆ ಬಿದ್ದಿದ್ದಾರೆ.

ಯುನುಸ್ ಅಬ್ದುಲ್ ಖಾದರ್ ಮಕಾನದಾರ್ 23 ಖಂಜರ್ ಗಲ್ಲಿ,ಹಾಗು ಪಂಜಿಬಾಬಾ ನಗರದ ಸಲ್ಮಾನ್ ಅಬ್ದುಲ್ ಹಮೀದ್ ಷಾ 24 ಇಬ್ಬರನ್ನು ಮಾರ್ಕೆಟ್ ಪೋಲೀಸ್ರು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಜಾರಕಿಹೊಳಿ ಕುಟುಂಬದ ಹಿರಿಯರಾದ ಪೂಜ್ಯ ದಿವಂಗತ ಶ್ರೀ ಲಕ್ಷ್ಮಣರಾವ್ ಆರ್. ಜಾರಕಿಹೊಳಿ ಹಾಗೂ ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ್ ಜಾರಕಿಹೊಳಿ ಅವರ ಪುಣ್ಯಸ್ಮರಣೆ

Spread the loveಜಾರಕಿಹೊಳಿ ಕುಟುಂಬದ ಹಿರಿಯರಾದ ಪೂಜ್ಯ ದಿವಂಗತ ಶ್ರೀ ಲಕ್ಷ್ಮಣರಾವ್ ಆರ್. ಜಾರಕಿಹೊಳಿ ಹಾಗೂ ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ