ಧಾರವಾಡ: ಇವತ್ತು ದೇಶಕ್ಕೆ ಆಫಘಾನಿಸ್ತಾನದ ವಿಡಿಯೋ ಪ್ರಸಾರವಾಗಿದೆ. ಇದು ದೇಶದ ಜನರಿಗೆ ಆತಂಕ ತಂದಿದೆ, ಇದು ಅಪಾಯಕಾರಿ ಬೆಳವಣಿಗೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಅಲ್ ಖೈದಾ ಮುಖ್ಯಸ್ಥ ಮಂಡ್ಯದ ಮುಸ್ಕಾನ್‍ಳನ್ನು ಬೆಂಬಲಿಸಿದ್ದಾನೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದರು.
ಶಾಲೆಯಲ್ಲಿ ಹಿಜಬ್ ಬ್ಯಾನ್ ಮಾಡಿದ್ದನ್ನು ವಿರೋಧಿಸಿದ್ದು ಅಚ್ಚರಿ ತಂದಿದೆ. ಹಿಜಬ್ ವಿಚಾರ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಿದೆ ಎಂದ ಅವರು, ಉಗ್ರ ಸಂಘಟನೆಗಳು ಈ ರೀತಿ ಹೇಳಿಕೆಯನ್ನು ಕೊಡುತ್ತಾರೆ ಎಂದರೆ ಇದರ ಹಿಂದೆ ಇಸ್ಲಾಂ ಕೆಲಸ ಮಾಡುತ್ತಿದೆ. ದೇಶದ್ರೋಹಿ ಸಂಘಟನೆ ಕೆಲಸ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.ದೇಶದಲ್ಲಿ ಮುಸ್ಲಿಮರಿಗೆ ಸ್ವಾತಂತ್ರವಿದೆ, ಇಲ್ಲಿದ್ದಷ್ಟು ಅನುಕೂಲ ಎಲ್ಲಿಯೂ ಇಲ್ಲ, ಆದರೆ ಇಲ್ಲಿನ ಮುಸ್ಲಿಮರು ದೇಶದ್ರೋಹದ ಕೆಲಸ ಮಾಡುತ್ತಾರೆಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಆದರೆ ಸರ್ಕಾರ ಇದನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.