Breaking News

ಮುಸ್ಲಿಮರ ಆಜಾನ್‌ ವಿರುದ್ಧ ಮಂತ್ರ ಪಠಣೆ ಅಭಿಯಾನಕ್ಕೆ ಚಾಲನೆ

Spread the love

ಹಾಸನ: ಮುಸ್ಲಿಮರ ಆಜಾನ್‌ ವಿರುದ್ಧ ಮಂತ್ರ ಪಠಣೆ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ.

ಹಾಸನದ ಅರಸೀಕೆರೆ ಕಾಳಿಕಾಂಬ ದೇಗುಲದಲ್ಲಿ ಕಾಳಿ ಮಂತ್ರವನ್ನು ಕಾಳಿ ಸ್ವಾಮೀಜಿ ಪಠಿಸಿದ್ದಾರೆ.

ಅಧಿಕೃತ ಮಸೀದಿಗಳಲ್ಲಿ ಮಾತ್ರ ಆಜಾನ್‌ ಕೂಗಲು ಅನುಮತಿ ಇದೆ. ಆದರೆ ಎಲ್ಲ ಮಸೀದಿಗಳಲ್ಲಿ ಆಜಾನ್‌ ಕೂಗಲಾಗುತ್ತದೆ. ಅಷ್ಟೇ ಅಲ್ಲದೇ ಆಜಾನ್‌ ಕೂಗಲು‌ ಸ್ಪಷ್ಟವಾದ ಕೋರ್ಟ್‌ ನಿಯಮವಿದೆ. ಆದರೆ ಈ ನಿಯಮವನ್ನು ಉಲ್ಲಂಘಿಸಿ ಆಜಾನ್‌ ಕೂಗಲಾಗುತ್ತದೆ.  ಈ ರೀತಿ ಆಜಾನ್‌ ಕೂಗುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದೇ ಇದ್ದರೆ ಹಿಂದೂ ದೇವಾಲಯಗಳಲ್ಲೂ ಭಜನೆ, ಮಂತ್ರವನ್ನು ಪಠಿಸಲಾಗುವುದು ಎಂದು ಹಿಂದೂ ಸಂಘಟನೆಗಳ ಮುಖಂಡರು ಸೋಮವಾರ ಎಚ್ಚರಿಕೆ ನೀಡಿದ್ದರು.

ಈ ಎಚ್ಚರಿಕೆ ಬೆನ್ನಲ್ಲೇ ಇಂದು ಮುಂಜಾನೆ 5:30ಕ್ಕೆ ಧ್ವನಿವರ್ಧಕದ ಮೂಲಕ ಕಾಳಿ ಸ್ವಾಮೀಜಿ ಮಂತ್ರಪಠಣ ಮಾಡಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. 


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ